ಶಿರಸಿಗೆ ಕುಡಿಯುವ ನೀರು ಪೂರೈಕೆಗೆ ಅಳವಡಿಸಿದ್ದ ಕಬ್ಬಿಣ್ಣದ ಪೈಪ್ ಕಳ್ಳತನ ಆರೋಪದಲ್ಲಿ ಕಾಂಗ್ರೆಸ್ಸಿನ ನಗರಸಭೆ ಸದಸ್ಯ ಯಶ್ವಂತ ಮರಾಠೆ ಹೆಸರಿದ್ದು, ಅವರ ವಿರುದ್ಧ ಕಾಂಗ್ರೆಸ್ ಕಠಿಣ ಕ್ರಮ ಜರುಗಿಸಿದೆ. ಯಶ್ವಂತ ಮರಾಠೆ ಅವರನ್ನು ಕಾಂಗ್ರೆಸ್ ದೂರವಿಟ್ಟಿದೆ.
ಪೊಲೀಸರು ನಡೆಸಿದ ತನಿಖೆಯಲ್ಲಿ ಯಶ್ವಂತ ಮರಾಠೆ ಕಬ್ಬಿಣದ ಪೈಪ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಪೈಪ್ ಕಳ್ಳತನ ಮಾಡಿದ್ದ ಹಾವೇರಿಯ ಗುಜುರಿ ಅಂಗಡಿಕಾರನಿAದ ಯಶ್ವಂತ ಮರಾಠೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಹಿನ್ನಲೆ ಯಶ್ವಂತ ಮರಾಠೆ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿದ್ದಾರೆ.
ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವರದಿ ಅನ್ವಯ ಪಕ್ಷದ ಜಿಲ್ಲಾಧ್ಯಕ್ಷರು ಸದಸ್ಯತ್ವವನ್ನು ಕಾಂಗ್ರೆಸ್ ಅಮಾನತಿನಲ್ಲಿರಿಸಿದೆ. ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಕೆಪಿಸಿಸಿ ಶಿಸ್ತು ಸಮಿತಿಗೂ ಶಿಫಾರಸ್ಸು ಮಾಡಲಾಗಿದೆ. ಮುಂದಿನ ಆದೇಶದವರೆಗೂ ಯಶ್ವಂತ ಮರಾಠೆ ಅವರ ಪ್ರಾಥಮಿಕ ಸದಸ್ಯತ್ವ ಅಮಾನತಿನಲ್ಲಿರಲಿದ್ದು, ಪಕ್ಷ ಕೈಗೊಳ್ಳುವ ನಿರ್ಣಯದ ಮೇರೆಗೆ ಅವರ ಸದ್ಯದ ರಾಜಕೀಯ ಪರಿಸ್ಥಿತಿ ನಿರ್ಧಾರವಾಗಲಿದೆ.
