ಹೊನ್ನಾವರದ ಅರಣ್ಯ ಪ್ರವೇಶಿಸಿ ಕಾಡು ಪ್ರಾಣಿ ಭೇಟೆಯಾಡಿದವರನ್ನು ಅರಣ್ಯ ಸಿಬ್ಬಂದಿ ಬೆನ್ನಟ್ಟಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿಗೆ 1 ಹಾಗೂ 2 ಕೆಜಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿದ್ದ ಅಂದಾಜು 60 ಕೆಜಿಯಷ್ಟು ಕಾಡು ಹಂದಿ ಮಾಂಸ ಸಿಕ್ಕಿದೆ.
ಹೊನ್ನಾವರದಲ್ಲಿ ಹೊನ್ನಾವರದ ಮುಗ್ವಾ ಬಳಿ ವಾಹನದಲ್ಲಿದ್ದ ಕಾಡು ಪ್ರಾಣಿ ಮಾಂಸವನ್ನು ಅರಣ್ಯ ಸಿಬ್ಬಂದಿ ವಶಕ್ಕೆಪಡೆದಿದ್ದು, ಪ್ರಾಣಿ ಹತ್ಯೆ ನಡೆಸಿದ್ದ ದುರುಳರು ತಪ್ಪಿಸಿಕೊಂಡಿದ್ದಾರೆ. ಮಹೇಂದ್ರ ಮಿನಿ ಗೂಡ್ಸ ವಾಹನದಲ್ಲಿ ಕಾಡು ಹಂದಿ ಮಾಂಸ ಸಾಗಾಟ ನಡೆಯುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಹೊನ್ನಾವರ ಕವಲಕ್ಕಿ ನಾಕಾದಿಂದ ಅರಣ್ಯಾಧಿಕಾರಿಗಳು ಆ ವಾಹನದ ಬೆನ್ನಟ್ಟಿದ್ದರು,.
ಹಾರೂರಿನ ಬಳಿ ಮಾಂಸ ಮಾರಾಟಗಾರರು ವಾಹನ ಬಿಟ್ಟು ಪರಾರಿಯಾದರು. ಉಪವಲಯ ಅರಣ್ಯಾಧಿಕಾರಿ ವಿಶಾಲ ದಮ್ಮನೊಳ, ಅರಣ್ಯ ಕಾವಲುಗಾರ ಶ್ರೀಧರ್ ಭಟ್ಟ ವಾಹನ ತಪಾಸಣೆ ನಡೆಸಿದಾಗ ಅಲ್ಲಿ ಮಾಂಸವಿರುವುದು ದೃಢವಾಯಿತು. ತಪ್ಪಿಸಿಕೊಳ್ಳುವ ಬರದಲ್ಲಿ ಆರೋಪಿತರು ಬೈಕ್ವೊಂದಕ್ಕೆ ತಮ್ಮ ವಾಹನ ಗುದ್ದಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ.
