ಬೈಕ್ ಮೇಲೆ ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಕೊಲೆ ಮಾಡಿ ಅವರ ಬಳಿಯಿದ್ದ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ರೂ ದಂಡವನ್ನು ಪಾವತಿಸಲು ಸೂಚಿಸಿದೆ.
ಸಿದ್ದಾಪುರದ ಕಾನಸೂರಿನ ಹಿರೆಕೈ ಬಳಿ 2016ರಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಶರತ್ ಆಚಾರಿ ಅವರನ್ನು ಇಬ್ಬರು ಅಡ್ಡಗಟ್ಟಿದ್ದರು. ನಂತರ ಅವರ ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಪೊಲೀಸ್ ತನಿಖೆಯಲ್ಲಿ ಭರತಸಿಂಗ್ ತ್ರಿಲೋಕ ಸಿಂಗ್ ಹಾಗೂ ದಿಲರಾಜ್ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ಈ ಪೈಕಿ ದಿಲರಾಜ್’ಗೆ ನ್ಯಾಯಾಲಯ ಈ ಮೊದಲೇ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಭರತಸಿಂಗ್’ಗೆ ಸಹ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯದೀಶರಾದ ಕಿರಣ ಕಿಣಿ ಈ ಆದೇಶ ಹೊರಡಿಸಿದ್ದು, ಸರ್ಕಾರದ ಪರವಾಗಿ ರಾಜೇಶ ಎಂ ಮಳಗಿಕರ್ ವಾದ ಮಂಡಿಸಿದ್ದರು. ಅಂದಿನ ಸಿದ್ದಾಪುರ ಪಿಐ ಜಯರಾಮ ಗೌಡ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣ ಪಟ್ಟಿ ಕೊಲೆಗಾರರಿಗೆ ಶಿಕ್ಷೆ ಕೊಡಿಸುವಲ್ಲಿ ನೆರವಾಯಿತು.
