ಯಲ್ಲಾಪುರದ ಮಂಜುನಾಥ ನಗರದ ಕೆರೆಗುಂಡಿ ಬಳಿ ಗಬ್ಬೆದ್ದಿದ ಸ್ಥಳ ಇದೀಗ ಸುಂದರ ಪರಿಸರವಾಗಿ ಬದಲಾಗಿದೆ. ತೊಗಲು ಹರಳಯ್ಯ ಟ್ರಸ್ಟಿನವರು ಸ್ಥಳ ಶುದ್ದಿನಡೆಸಿ ಅಲ್ಲಿ ಕಚೇರಿಯನ್ನು ಶುರು ಮಾಡಿದ್ದಾರೆ.
ಅನೇಕ ವರ್ಷಗಳ ಹಿಂದೆ ಈ ಭಾಗದಲ್ಲಿ ಚರ್ಮ ಹದ ಮಾಡುತ್ತಿದ್ದರು. ಆದರೆ, ಕ್ರಮೇಣ ಆ ಸ್ಥಳ ಗಬ್ಬೆದ್ದಿತ್ತು. ಅದರ ಪರಿಣಾಮ ಮಳೆ ನೀರು ಸಂಗ್ರಹವಾಗುತ್ತಿತ್ತು. ಜೊತೆಗೆ ಕನ ಕಸ ಎಸೆಯುವ ಸ್ಥಳವಾಗಿಯೂ ಅದು ಬದಲಾಗಿತ್ತು. ಇದನ್ನು ನೋಡಿದ ತೊಗಲು ಹರಳ್ಳಯ್ಯ ಟ್ರಸ್ಟಿನವರು ಪೂರ್ವಜರು ಬಳಸುತ್ತಿದ್ದ ಸ್ಥಳವನ್ನು ಸುಂದರವಾಗಿಸುವ ಸಂಕಲ್ಪ ಮಾಡಿದರು.
ಅದರ ಪ್ರಕಾರ, ತಿಂಗಳಿಗೊಮ್ಮೆ ಆ ಸ್ಥಳದ ಸ್ವಚ್ಛತೆಗೆ ಆದ್ಯತೆ ನೀಡಿದರು. ಎಷ್ಟು ಬಾರಿ ಸ್ವಚ್ಚ ಮಾಡಿದರೂ ಪದೇ ಪದೇ ಕಸ ಬರುವುದನ್ನು ಗಮನಿಸಿ ಅದೇ ಸ್ಥಳದಲ್ಲಿ ಕಚೇರಿಯನ್ನು ಶುರು ಮಾಡಿದರು. ಸದ್ಯ ನಾಲ್ಕು ತಿಂಗಳಿನಿoದ ಸ್ವಚ್ಚತಾ ಕೆಲಸ ನಡೆದಿದೆ. ಪರಿಣಾಮ ತ್ಯಾಜ್ಯ ತುಂಬಿದ ಸ್ಥಳ ಸುಂದರ ಪರಿಸರವಾಗಿ ಬದಲಾಗುತ್ತಿದೆ.
`ಜನ ತಿರುಗಾಡಲು ಸಹ ಸಾಧ್ಯವಾಗದ ರೀತಿಯಲ್ಲಿದ್ದ ಪ್ರದೇಶ ಇದೀಗ ಬದಲಾಗಿದೆ. ಹಿರಿಯರ ಆಶ್ರಯದಂತೆ ಇಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಲ್ಲಿ ಸಫಲರಾಗಿದ್ದೇವೆ’ ಎಂದು ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ್ ರೇವಣಕರ್ ಅನಿಸಿಕೆ ಹಂಚಿಕೊoಡರು. `ಹಿರಿಯರು ಮಾಡುತ್ತಿದ್ದ ಕುಲಕಸುಬಿಗೆ ಪೂರಕವಾಗಿ ಈ ಜಾಗವಿದೆ. ಅಲ್ಲಿ ಸ್ವಚ್ಚತೆ ಕಾಪಾಡಿಕೊಂಡಿದ್ದರಿAದ ಸ್ಥಳದ ಅಭಿವೃದ್ದಿಗೂ ಸಹಕಾರಿಯಾಗಿದೆ’ ಎಂದು ಅಂಬೆಡ್ಕರ ನಗರದ ಪಟ್ಟಣ ಪಂಚಾಯತ ಸದಸ್ಯರೂ ಆಗಿರುವ ಟ್ರಸ್ಟಿನ ಕಾರ್ಯದರ್ಶಿ ರವಿ ಪಾಟಣಕರ್ ಹೇಳಿದರು.
ಟ್ರಸ್ಟಿನ ಖಜಾಂಜಿ ನಿರಂಜನ್ ಪಾಟನಕರ್, ಸದಸ್ಯರಾದ ಗಣೇಶ ಪಾಟಣಕರ್, ರೂಪಾ ಪಾಟಣಕರ್, ವಿಶ್ವನಾಥ ಬೊರಕರ್, ಪ್ರಶಾಂತ ಪಾಟಣಕರ್ , ರಾಜಾ ಪಾಲೆಕರ ಮೊದಲಾದವರು ಸೇರಿ ಈ ದಿನ ಸ್ವಚ್ಛತಾ ಅಭಿಯಾನ ನಡೆಸಿದರು.
