ಅಂಕೋಲಾದ ಮಲ್ಲಾವಾಡದಲ್ಲಿರುವ ಎಲ್ಐಸಿ ಎಜೆಂಟ್ ಮಹಮದ್ ಶೇಖ್ ಅವರ ಮನೆ ಮೇಲೆ ಬಾಡಿಗೆಗಿದ್ದ ಮೋಪಿದ್ ಅಬ್ದುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಪ್ರದೇಶದ ಮೋಪಿದ್ ಅಬ್ದುಲ್ (20) ಕಳೆದ ಒಂದು ವರ್ಷದಿಂದ ಮಹಮದ್ ಶೇಖ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಕಟಿಂಗ್ ಶಾಪಿನಲ್ಲಿ ಕೆಲಸ ಮಾಡುತ್ತಿದ್ದ ಮೋಪಿದ್ ಅಬ್ದುಲ್ ಒಂದು ತಿಂಗಳ ಹಿಂದೆ ತಮ್ಮ ಪತ್ನಿ-ಮಕ್ಕಳನ್ನು ಅಂಕೋಲಾಗೆ ಕರೆದುಕೊಂಡು ಬಂದಿದ್ದರು. ಗಂಡ-ಹೆoಡತಿ ನಡುವೆ ನಿತ್ಯವೂ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗುತ್ತಿತ್ತು. ನಂತರ ಅವರು ಮತ್ತೆ ಒಂದಾಗುತ್ತಿದ್ದರು.
ದoಪತಿ ನಡುವಿನ ಜಗಳದ ವಿಷಯದಲ್ಲಿ ಮನೆ ಮಾಲಕರು ಮೂಗು ತೂರಿಸುತ್ತಿರಲಿಲ್ಲ. ಆ ಜಗಳವನ್ನು ನೋಡಿಯೂ ನೋಡದಂತೆ ಮೌನವಾಗಿರುತ್ತಿದ್ದರು. ಅಗಸ್ಟ 11ರಂದು ಸಹ ಆ ದಂಪತಿ ನಡುವೆ ಜಗಳವಾಗಿತ್ತು. ಮಗುವಿನ ವಿಷಯವಾಗಿ ಅವರಿಬ್ಬರು ದೊಡ್ಡ ಜಗಳ ಮಾಡಿಕೊಂಡಿದ್ದರು. `ಎಂದಿನAತೆ ಈ ಜಗಳವೂ ಮಾಮೂಲಿ’ ಎಂದು ಮಹಮದ್ ಶೇಖ್ ಭಾವಿಸಿದ್ದರು.
ಆದರೆ, ಈ ಜಗಳ ಹಾಗಾಗಿರಲಿಲ್ಲ. ಅದೇ ದಿನ ಸಂಜೆ ಮೋಪಿದ್ ಅಬ್ದುಲ್ ತಾವು ಬಾಡಿಗೆಗಿದ್ದ ಮನೆಯಲ್ಲಿ ನೇಣಿಗೆ ಶರಣಾದರು. ಮಹಮದ್ ಶೇಖ್ ಅವರು ನಡೆದ ಘಟನಾವಳಿಗಳ ಬಗ್ಗೆ ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
