ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಅಗಸ್ಟ 13ರಂದು ಕ್ಷಯ ರೋಗದ ಲಸಿಕೆಪಡೆಯಲಿದ್ದಾರೆ. ಅವರಿಗೆ ಯಾವುದೇ ರೋಗ ಇಲ್ಲದಿದ್ದರೂ ಜನ ಜಾಗೃತಿಗಾಗಿ ಅವರು ಈ ಲಸಿಕೆ ಸ್ವೀಕರಿಸಲು ನಿರ್ಧರಿಸಿದ್ದಾರೆ.
ಸಕಾರ ಕ್ಷಯ ರೋಗ ನಿರ್ಮೂಲನೆಗೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ, ಸರ್ಕಾರದ ಬಿಸಿಜಿ ಲಸಿಕೆ ಜನರ ಮನಸ್ಸಿನ ಮೇಲೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಣಾಮ ಬೀರಲಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಆರೋಗ್ಯ ಸಚಿವರು ಈ ಬಗ್ಗೆ ಚರ್ಚಿಸಿದ್ದು, ಲಸಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಸೂಚಿಸಿದ್ದಾರೆ. ಈ ಹಿನ್ನಲೆ ಐಎಎಸ್ ಅಧಿಕಾರಿಯಾಗಿರುವ ದಿಲೀಷ್ ಶಶಿ ಅವರು ಸ್ವತಃ ತಾವೇ ಲಸಿಕೆಪಡೆದು ಜನರನ್ನು ಪ್ರೇರೇಪಿಸಲು ಮುಂದಾಗಿದ್ದಾರೆ.
ಈ ಲಸಿಕೆಪಡೆಯಲು ಕ್ಷಯರೋಗವೇ ಇರಬೇಕು ಎಂದಿಲ್ಲ. ರೋಗ ನಿರೋಧಕ ಶಕ್ತಿ ಕುಂಠಿತಗೊoಡಿರುವ ವಯಸ್ಕರೆಲ್ಲರೂ ಈ ಲಸಿಕೆಪಡೆಯುವುದು ಉತ್ತಮ. ಜೊತೆಗೆ ಈ ಮೊದಲು ಕ್ಷಯರೋಗದಿಂದ ಬಳಲಿದವರು, ರೋಗಿಗಳ ನಿಕಟ ಸಂಪರ್ಕದಲ್ಲಿದ್ದವು, ಮಧುಮೇಹ ಖಾಯಿಲೆಹೊಂದಿದವರು ಹಾಗೂ ಅಪೌಷ್ಠಿಕತೆ ಹೊಂದಿದವರು ಈ ಲಸಿಕೆ ಸ್ವೀಕರಿಸುವುದು ಸೂಕ್ತ. ತಂಬಾಕು ಸೇವನೆ ಮಾಡುವವರು ಈ ಲಸಿಕೆಪಡೆದರೆ ಅವರ ಆರೋಗ್ಯಕ್ಕೆ ಒಳೆಯದು. ಲಸಿಕೆ ಪಡೆದ ಮುಂದಿನ 18 ವರ್ಷಗಳವರೆಗೆ ದೇಹ ಕ್ಷಯರೋಗದ ವಿರುದ್ಧ ಹೋರಾಟ ನಡೆಸುವುದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಈ ಲಸಿಕೆಪಡೆಯಲು ಅರ್ಹರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 22148 ಪಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಅದರ ಮುಂದುವರೆದ ಭಾಗವಾಗಿ ಜನರಲ್ಲಿ ಅರಿವು ಮೂಡಿಸಲು ದಿಲೀಷ್ ಶಶಿ ಅವರು ಲಸಿಕೆಪಡೆಯಲಿದ್ದಾರೆ. ಅಗಸ್ಟ 13ರಂದು ಕಾರವಾರದ ಬೈತಖೋಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಅವರು ಈ ಲಸಿಕೆಪಡೆಯಲಿದ್ದಾರೆ.
