ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ನಿಗ್ರಹಕ್ಕೆ ಪೊಲೀಸ್ ಇಲಾಖೆ ಪ್ಲೆಯಿಂಗ್ ಸ್ಕ್ವಾಡ್ ರಚಿಸಿದೆ. ಮಟ್ಕಾ, ಲಾಟರಿ ಹಾಗೂ ಬೆಟ್ಟಿಂಗ್ ದಂಧೆ ಮೇಲೆ ಈ ದಳದವರು ದಾಳಿ ನಡೆಸಲಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 86 ಮಟ್ಕಾ ಆಟಗಾರರು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. 101 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ಪ್ರಕರಣಗಳಲ್ಲಿ ಮಟ್ಕಾ ಬುಕ್ಕಿಗಳ ಹೆಸರನ್ನು ಸೇರಿಸಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ. `ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಟರಿ ಹಾಗೂ ಮಟ್ಕಾ ಮುಕ್ತ ವಲಯವನ್ನಾಗಿಸಬೇಕು’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎ ಕರೆ ನಿಡಿದ್ದಾರೆ.
`ಪ್ಲೆಯಿಂಗ್ ಸ್ಕ್ವಾಡ್ ಸದಸ್ಯರು ಚುರುಕಾರಿಗರಬೇಕು. ಅನಧಿಕೃತ ಲಾಟರಿ, ಮಟ್ಕಾ ಹಾವಳಿ ಹಾಗೂ ಬೆಟ್ಟಿಂಗ್ ಪ್ರಕರಣಗಳನ್ನು ಸಮರ್ಥವಾಗಿ ನಿಯಂತ್ರಿಸಬೇಕು. ಪೊಲೀಸರು ಸಹ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದ್ದಾರೆ’ ಎಂದವರು ಹೇಳಿದರು. ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ ಅಹ್ಮದ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ವಾಣಿಜ್ಯ ತೆರಿಗೆ ಅಧಿಕಾರಿ ಷಣ್ಮುಗಪ್ಪ ನರೇಗಲ್, ಪ್ಲೆಯಿಂಗ್ ಸ್ಕ್ವಾಡ್’ನ ಸದಸ್ಯ ಸಮಾವೇಶಕ ಹಾಗೂ ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಪಟಗಾರ, ಅಭಿವೃದ್ಧಿ ಅಧಿಕಾರಿ ಕಾಶಿಮಸಾಬ ಮುಲ್ಲಾ, ಶೋಲಿನ್ ಡಿ ಕೋಸ್ಟಾ ಇದ್ದರು.
