ದಾಂಡೇಲಿಯ ಅಲೈಡ್ ಎರಿಯಾದಲ್ಲಿ ಬಲೆಗೆ ಮೊಸಳೆ ಸಿಕ್ಕಿಬಿದ್ದಿದ್ದು, ನದಿಗೆ ಮರಳಲಾಗದೇ ಸಮಸ್ಯೆ ಅನುಭವಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮೊಸಳೆಯನ್ನು ನದಿಗೆ ಬಿಟ್ಟಿದ್ದಾರೆ.
ಬುಧವಾರ ಅಲೈಡ್ ಏರಿಯಾದ ನದಿ ಅಂಚಿನ ಬಟ್ಟೆ ತೊಳೆಯುವ ಜಾಗದಲ್ಲಿ ಮೊಸಳೆ ಕಾಣಿಸಿಕೊಂಡಿತು. ಮಧ್ಯಾಹ್ನದ ವೇಳೆ ಅಲ್ಲಿಗೆ ಆಗಮಿಸಿದ ಮೊಸಳೆ ಮರಳಿ ಹೋಗುತ್ತಿರಲಿಲ್ಲ. ಮೊಸಳೆ ನೋಡಿದ ಜನ ಆತಂಕಕ್ಕೆ ಒಳಗಾದರು. ಸೂಕ್ಷ್ಮವಾಗಿ ಗಮನಿಸಿದಾಗ ಆ ಮೊಸಳೆ ಬಲೆಗೆ ಸಿಲುಕಿರುವುದು ಗಮನಕ್ಕೆ ಬಂದಿತು.
14 ಅಡಿ ಉದ್ದವಿದ್ದ ಈ ಮೊಸಳೆ ಮಧ್ಯಾಹ್ನ ದಡಕ್ಕೆ ಬಂದಿದ್ದು, ಮರಳುವಾಗ ಬಲೆಗೆ ಸಿಲುಕಿತ್ತು. ಅಲ್ಲಿದ್ದ ಜನ ಅರಣ್ಯ ಇಲಾಖೆಯವರಿಗೆ ಮೊಸಳೆ ಬಂದ ವಿಷಯ ಮುಟ್ಟಿಸಿದರು. ಬಟ್ಟೆ ತೊಳೆಯುವ ಜಾಗದಲ್ಲಿ ಜನರ ಸುರಕ್ಷತೆಗೆ ಜಾಲಿ ಅಳವಡಿಸಿದ್ದು, ಆ ಜಾಲಿ ಮೊಸಳೆ ಪಾಲಿಗೆ ಮುಳುವಾಗಿತ್ತು. ಪೊಲೀಸರು ಮೊಸಳೆ ನೋಡಲು ಬಂದಿದ್ದು, ರಕ್ಷಣಾ ಕಾರ್ಯಕ್ಕೆ ಕೈ ಚೋಡಿಸಿದರು.
