ಭಟ್ಕಳದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ `ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಎಂಬ ಸಂಘಟನೆ ಮುಂದೆ ಬಂದಿದೆ. ಭಟ್ಕಳದ ಜೊತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ಸಂಘಟನೆ ಬೇರೂರಿದೆ.
`ಪತ್ರಕರ್ತರ ಮೇಲೆ ನಡೆಯುವ ಹಲ್ಲೆ, ದಬ್ಬಾಳಿಕೆ ವಿರುದ್ಧ ಈ ಸಂಘಟನೆ ಹೋರಾಟ ನಡೆಸಲಿದೆ. ಈ ಹಿನ್ನಲೆ ರಾಜ್ಯದ ಎಲ್ಲಡೆ ಸಂಘಟನೆಯನ್ನು ಇನ್ನಷ್ಟು ಭಲಗೊಳಿಸಲಾಗುತ್ತಿದೆ’ ಎಂದು ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಸುದ್ದಿಗಾರರಿಗೆ ಹೇಳಿದರು. ಭಟ್ಕಳ ತಾಲೂಕಿಗೆ ಸಂಘದ ಪದಾಧಿಕಾರಿಗಳನ್ನು ಅವರು ಆಯ್ಕೆ ಮಾಡಿದರು.
ತಾಲೂಕ ಪತ್ರಕರ್ತರ ಈ ಸಂಘಟನೆಯ ಅಧ್ಯಕ್ಷರಾಗಿ ಶಂಕರ್ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ಎಂ ಮಲ್ಯ, ಉಪಾಧ್ಯಕ್ಷರಾಗಿ ಉಲ್ಲಾಸ್ ಶಾನಬಾಗ್, ಖಜಂಚಿಯಾಗಿ ನಸೀಮುಲ್ಲಾ ಘನೀ ಶಭಾಔದ್ರಿ ಆಯ್ಕೆಯಾದರು. ಸದಸ್ಯರಾಗಿ ಈಶ್ವರ್ ನಾಯ್ಕ, ಜಾವೇದ್ ಅಹಮದ್ ಸಿಂಗೇರಿ, ಮಾರುತಿ ನಾಯ್ಕ ಸೇರಿದರು.
ನೂತನವಾಗಿ ಆಯ್ಕೆಯಾದ ಭಟ್ಕಳ ತಾಲೂಕ ಪದಾಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕರಾವಳಿ ಕರ್ನಾಟಕದ ವಿಭಾಗದ ಅಧ್ಯಕ್ಷ ಕುಮಾರ ನಾಯ್ಕ ಮತ್ತು ಸಂಘದ ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ ಮುಂಡಗೋಡು ಶುಭ ಕೋರಿದರು.
