ಕುಮಟಾದಲ್ಲಿ ಹೆದ್ದಾರಿ ಅಂಚಿನ ಅಂಗಡಿ ಮುಂದೆ ಮಲಗಿದ್ದ ಜಾನುವಾರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಟರ ಹುಡುಕಾಟ ಶುರು ಮಾಡಿದ್ದಾರೆ.
ಕುಮಟಾ ಕೋಡ್ಕಣಿಯ ಐಗಳಕೂರ್ವೆಯ ಲೋಹಿತ ಭಂಡಾರಿ ಅವರು ಮಿರ್ಜಾನ್ ಹೆದ್ದಾರಿ ಅಂಚಿನಲ್ಲಿ ಅಂಗಡಿ ಹೊಂದಿದ್ದಾರೆ. ಅವರ ಅಂಗಡಿಯ ಮುಂದೆ ಮಲಗಿದ್ದ ಎತ್ತು ಕಾಣೆಯಾಗಿದೆ. ಅಂಗಡಿ ಎದುರಿನ ಶೆಡ್ಡಿನಲ್ಲಿ ಎತ್ತು ಆಶ್ರಯಪಡೆದಿದ್ದು, ಇಬ್ಬರು ಆಗಂತುಕರು ಅದನ್ನು ಎತ್ತಿಕೊಂಡು ಹೋದ ಬಗ್ಗೆ ಲೋಹಿತ ಭಂಡಾರಿ ಅವರು ಪೊಲೀಸ್ ದೂರು ನೀಡಿದ್ದಾರೆ.
ಅಗಸ್ಟ 12ರ ಬೆಳಗ್ಗೆ 3.30ರ ನಸುಕಿನಲ್ಲಿ ಬಂದ ದುಷ್ಕರ್ಮಿಗಳು ಆ ಜಾನುವಾರನ್ನು ಕದ್ದೊಯ್ದ ಬಗ್ಗೆ ಲೋಹಿತ ಭಂಡಾರಿ ಅವರು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸರು ವಿವಿಧ ಆಯಾಮಗಳ ಅಡಿ ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ
