ಕುಟುಂಬದವರ ಕಾಟದಿಂದ ಬೇಸತ್ತ ಮುಂಡಗೋಡಿನ ಉಸುಕು ವ್ಯಾಪಾರಿಯೊಬ್ಬರು ತಮ್ಮ ತಂದೆ, ತಮ್ಮ, ಚಿಕ್ಕಮ್ಮನ ವಿರುದ್ಧವೂ ಆರೋಪ ಹೋರಿಸಿ ವಿಷ ಕುಡಿದಿದ್ದಾರೆ. ಆತ್ಮಹತ್ಯೆ ಪ್ರಯತ್ನಕ್ಕೂ ಮುನ್ನ ವಿಡಿಯೋದಲ್ಲಿ ತಮಗಾದ ಅನ್ಯಾದ ಬಗ್ಗೆ ವಿವರಿಸಿದ್ದಾರೆ.
ಮುಂಡಗೋಡು ಕಳಗಿನಕೊಪ್ಪದ ಶಿವರಾಜ ಬಮ್ಮಿಘಟ್ಟಿ ಬುಧವಾರ ಕಾರಿನಲ್ಲಿ ಕುಳಿತು ವಿಡಿಯೋ ಮಾಡಿದ್ದಾರೆ. ತಮಗೆ ಆದ ಹಿಂಸೆಯನ್ನು ಅವರು ಕಾರಿನಲ್ಲಿ ವಿವರಿಸಿದ್ದಾರೆ. ಅದರಲ್ಲಿ ಕೌಟುಂಬಿಕ ವಿಷಯಗಳ ಬಗ್ಗೆ ಅವರು ಮಾತನಾಡಿದ್ದು, `ತಾನೂ ಪತ್ನಿಗೆ ಏನೂ ಕಡಿಮೆ ಮಾಡಿಲ್ಲ. ಮಾವ – ಅತ್ತೆಯಿಂದಲೂ ತಮಗೆ ಹಿಂಸೆಯಾಗಿದೆ. ಅಗೌರವ ರೀತಿ ಮಾತನಾಡಿದ್ದಾರೆ. ಕಾಲಿಗೆ ಬಿದ್ದರೂ ತನ್ನನ್ನು ಕ್ಷಮಿಸಿಲ್ಲ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
`ತಾನು ಬೇರೆ ಮದುವೆ ಆಗಬಹುದಿತ್ತು. ಆದರೆ, ಹೆಣ್ಣಿನ ಶಾಪ ಬೇಡ ಎಂದು ಮದುವೆ ಆಗಿಲ್ಲ’ ಎಂದೆಲ್ಲ ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಮೊದಲು ಅತ್ತೆಗೆ ಬೈದ ಅವರು ನಂತರ `ನಮ್ಮ ಅತ್ತೆ ದೇವರು ಇದ್ದ ಹಾಗೇ’ ಎಂದು ಸಹ ಹೇಳಿದ್ದಾರೆ. ಕೊನೆಗೆ `ಹಿಂಸೆ ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ’ ಎಂದು ಹೇಳಿ ವಿಷ ಕುಡಿದಿದ್ದಾರೆ. ಚಲಿಸುತ್ತಿರುವ ಕಾರಿನಲ್ಲಿ ಈ ವಿಡಿಯೋ ಮಾಡಿರುವುದು ಕಾಣುತ್ತಿದೆ.
ಕಾರಿನಲ್ಲಿ ಒದ್ದಾಡುತ್ತಿದ್ದ ಶಿವರಾಜ ಬಮ್ಮಿಘಟ್ಟಿ ಅವರನ್ನು ಸ್ನೇಹಿತರು ಆಸ್ಪತ್ರೆಗೆ ರವಾನಿಸಿದ್ದಾರೆ. ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
