ಮುಂಡಗೋಡಿನ ಸುಣ್ಣದ ವ್ಯಾಪಾರಿ ರಾಮಣ್ಣ ಸುಣಗಾರ್ ಅವರು ಕೆರೆಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಕೆರೆ ದಡದಲ್ಲಿ ಅವರ ಶವ ನೋಡಿದ ಪುತ್ರ ಮಂಜುನಾಥ ಸುಣಗಾರ್ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.
ಮುಂಡಗೋಡಿನ ಚಿಗಳ್ಳಿ ಕಾವಲಕೊಪ್ಪದಲ್ಲಿ ರಾಮಣ್ಣ ಸುಣಗಾರ್ (67) ಅವರು ವಾಸವಾಗಿದ್ದರು. ಸುಣ್ಣದ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಅವರ ಮಗ ಮಂಜುನಾಥ ಸಹ ಈ ವ್ಯಾಪಾರದಲ್ಲಿ ಕೈ ಜೋಡಿಸಿದ್ದರು. ಈಚೆಗೆ ರಾಮಣ್ಣ ಸುಣಗಾರ್ ಅವರು ಅನಾರೋಗ್ಯಕ್ಕೆ ಒಳಗಾಗಿ ವಿಶ್ರಾಂತಿಪಡೆಯುತ್ತಿದ್ದರು.
ಈ ನಡುವೆ ರಾಮಣ್ಣ ಸುಣಗಾರ್ ಅಗಸ್ಟ 12ರಂದು ಸಾಲಗಾಂವ್ ಕಡೆ ಹೊರಟರು. ಅಲ್ಲಿನ ಬಾಣಂತಿದೇವಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನಪ್ಪಿದರು. ಕೆರೆ ದಂಡೆ ಮೇಲೆ ಶವ ನೋಡಿದ ಮಂಜುನಾಥ ಸುಣಗಾರ್ ಅವರು ಆಘಾತಕ್ಕೆ ಒಳಗಾಗಿ, ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಗಮನಿಸಿ: ಅಪಾಯಕಾರಿ ಸ್ಥಳದ ಕಡೆ ಹೋಗಬೇಡಿ. ಮಳೆಗಾಲದ ಮುನ್ನಚ್ಚರಿಕೆವಹಿಸಿ
