ದಾಂಡೇಲಿಯ ದಾಂಡೇಲಪ್ಪ ಸೊಸೈಟಿಯಲ್ಲಿ ಗುಮಾಸ್ತರಾಗಿರುವ ಅನುರಾಜ ಕಾಂಬ್ರೇಕರ್ ಅವರ ಬೈಕಿಗೆ ತಮ್ಮ ಬೈಕು ಗುದ್ದಿ ಆಸ್ಪತ್ರೆ ಸೇರಿದ್ದ ವಿರೂಪಾಕ್ಷ ಕಾಂಬಳೆ ಸಾವನಪ್ಪಿದ್ದಾರೆ. ಅಪಘಾತದಲ್ಲಿ ಅನುರಾಜ ಕಾಂಬ್ರೇಕರ್ ಅವರಿಗೂ ಗಾಯವಾಗಿದ್ದು, ಅವರು ಚಿಕಿತ್ಸೆಪಡೆಯುತ್ತಿದ್ದಾರೆ.
ದಾಂಡೇಲಿಯ ಆಲೂರಿನ ಅನುರಾಜ ಕಾಂಬ್ರೇಕರ್ ಅವರು ಅಗಸ್ಟ 9ರಂದು ದಾಂಡೇಲಿಯಿAದ ಹಳಿಯಾಳದ ಕಡೆ ಬೈಕ್ ಓಡಿಸುತ್ತಿದ್ದರು. ಎದುರಿನಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಮಹಾರಾಷ್ಟದ ವಿರೂಪಾಕ್ಷ ಕಾಂಬಳೆ ಅವರು ಬರುತ್ತಿದ್ದರು. ಅನುರಾಜ ಕಾಂಬ್ರೇಕರ್ ಅವರ ಬೈಕಿಗೆ ವಿರೂಪಾಕ್ಷ ಕಾಂಬಳೆ ಅವರ ಬೈಕು ಡಿಕ್ಕಿಯಾಯಿತು.
ಪರಿಣಾಮ ಎರಡು ಬೈಕು ಜಖಂ ಆಗಿದ್ದು, ಇಬ್ಬರು ನೆಲಕ್ಕೆ ಬಿದ್ದು ಗಾಯಗೊಂಡರು. ಆ ಪೈಕಿ ವಿರೂಪಾಕ್ಷ ಕಾಂಬಳೆ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿತ್ತು. ಅನುರಾಜ ಕಾಂಬ್ರೇಕರ್ ಅವರಿಗೂ ಕೈ-ಕಾಲುಗಳಿಗೆ ಗಾಯವಾಗಿತ್ತು. ವಿರೂಪಾಕ್ಷ ಕಾಂಬಳೆ ಅವರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಿಸದೇ ವಿರೂಪಾಕ್ಷ ಕಾಂಬಳೆ ಅವರು ಸಾವನಪ್ಪಿದ್ದು, ಈ ಬಗ್ಗೆ ಆಸ್ಪತ್ರೆಯವರು ದಾಂಡೇಲಿ ಪೊಲೀಸರಿಗೆ ವಿಷಯ ಮುಟ್ಟಿಸಿದರು.
ಹೆಲ್ಮೆಟ್ ಧರಿಸಿ.. ಸುರಕ್ಷಿತವಾಗಿ ಬೈಕ್ ಓಡಿಸಿ
