ಮುಂಡಗೋಡಿನ ಲೋಲಿಯಾ ಪ್ರೌಢಶಾಲೆ ಶಿಕ್ಷಕ ವಿನಾಯಕ ಶೇಟ್ ದಿಢೀರ್ ನಾಪತ್ತೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಸುಳಿವು ಸಿಗದ ಕಾರಣ ಅವರ ಪತ್ನಿ ಪದ್ಮಶ್ರೀ ಶೇಟ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಮುಂಡಗೋಡು ಕರಗಿನಕೊಪ್ಪ ಬಳಿಯ ವಿನಾಯಕ ಶೇಟ್ ಅವರು ಚಿಗಳ್ಳಿಯಲ್ಲಿ ವಾಸವಾಗಿದ್ದರು. ಅಗಸ್ಟ 12ರ ಸಂಜೆಯವರೆಗೂ ವಿನಾಯಕ ಶೇಟ್ ಅವರು ಮನೆಯಲ್ಲಿದ್ದರು. 5 ಗಂಟೆ ನಂತರ ಮನೆಯಿಂದ ಹೊರಗೆ ಹೋದ ಅವರು ಮರಳಿ ಬರಲಿಲ್ಲ.
ಮನೆಯಿಂದ ಹೊರಗೆ ಹೋಗುವಾಗ `ಇಲ್ಲೇ ಹೋಗಿ ಬರುತ್ತೇನೆ’ ಎಂದು ವಿನಾಯಕ ಶೇಟ್ ಅವರು ಹೇಳಿದ್ದರು. ಸಂಜೆಯಾದರೂ ಮರಳದ ಕಾರಣ ಅವರ ಪತ್ನಿ ಆತಂಕಕ್ಕೆ ಒಳಗಾದರು. ಪರಿಚಯಸ್ಥರು ಹಾಗೂ ಸಂಬAಧಿಕರಲ್ಲಿ ಪತಿ ಬಗ್ಗೆ ವಿಚಾರಿಸಿದರು. ಆದರೆ, ಎಲ್ಲಿಯೂ ಅವರು ಸಿಗಲಿಲ್ಲ.
ಹೀಗಾಗಿ ಮುಂಡಗೋಡು ಪೊಲೀಸ್ ಠಾಣೆಗೆ ಬಂದ ಪದ್ಮಶ್ರೀ ಶೇಟ್ ಅವರು ಪತಿ ಕಾಣೆಯಾದ ಬಗ್ಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗಮನಿಸಿ: ಎಲ್ಲೇ ಹೋಗುವುದಾದರೂ ಆಪ್ತರಲ್ಲಿ ಹೇಳಿ ಹೋಗಿ
