ಮೇಷ ರಾಶಿ: ಕೆಲಸದಲ್ಲಿ ಅಧಿಕ ಒತ್ತಡ ಅನಿವಾರ್ಯ. ಆರ್ಥಿಕ ಪ್ರಗತಿಯೂ ಕುಸಿತ. ಆರೋಗ್ಯದಲ್ಲಿ ಏರುಪಾರಾಗಲಿದೆ. ಬೇಸರಕ್ಕೆ ಕಾರಣವಾಗುವ ಘಟನೆ ನಡೆಯುವ ಲಕ್ಷಣವಿದೆ.
ವೃಷಭ ರಾಶಿ: ಹಣಕಾಸಿನ ಒತ್ತಡದ ಬಗ್ಗೆ ಚಿಂತೆ ಬೇಡ. ಆರೋಗ್ಯ ಸುಧಾರಿಸಲಿದೆ. ಮಕ್ಕಳು ಹಾಗೂ ಪ್ರೀತಿ ಪಾತ್ರರ ಜೊತೆ ಕಾಲ ಕಳೆಯಿರಿ.
ಮಿಥುನ ರಾಶಿ: ಜೀವನದಲ್ಲಿ ಸವಾಲು ಸಾಮಾನ್ಯ. ಧೈರ್ಯದಿಂದ ಸವಾಲು ಎದುರಿಸಿ. ಆರೋಗ್ಯಕರ ಜೀವನ ಸಿಗಲಿದೆ. ಅಲ್ಪ ಪ್ರಮಾಣದ ಆಹಾರ ಆರೋಗ್ಯಕ್ಕೆ ಸಹಕಾರಿ.
ಕರ್ಕ ರಾಶಿ: ನಿರಾಸೆಯ ಭಾವನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಅಂಜದೇ ಶೃದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ.
ಸಿಂಹ ರಾಶಿ: ಉದ್ಯಮದಲ್ಲಿ ಲಾಭ ಸಿಗಲಿದೆ. ಕುಟುಂಬದ ಹೊಣೆಗಾರಿಕೆ ಹೆಚ್ಚಾಗಲಿದೆ. ಮಕ್ಕಳ ಆರೋಗ್ಯ ಶಿಕ್ಷಣಗ ಬಗ್ಗೆ ಕಾಳಜಿವಹಿಸಿ. ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಿ.
ಕನ್ಯಾ ರಾಶಿ: ಹಳೆಯ ಸ್ನೇಹಿತರು ಸಿಗಲಿದ್ದಾರೆ. ಮಾತನಾಡುವಾಗ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಗಮನಕೊಡಿ.
ತುಲಾ ರಾಶಿ: ಈ ದಿನ ನಿಮಗೆ ಸಂತೋಷದಿ0ದ ಕೂಡಿರಲಿದೆ. ಹಣ ಖರ್ಚಾಗುವ ಸಾಧ್ಯತೆ ಹೆಚ್ಚಿದೆ. ಕೆಲ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ.
ವೃಶ್ಚಿಕ ರಾಶಿ: ನಿಮ್ಮ ಮಾತು ನಿಮ್ಮ ಹಿಡಿತದಲ್ಲಿರಲಿ. ಹೊಸ ಯೋಜನೆಗಳಲ್ಲಿ ಲಾಭ ಸಿಗಲಿದೆ. ಕೆಲಸದ ವಿಷಯದಲ್ಲಿ ಸರಿಯಾದ ನಿರ್ಧಾರ ಮಾಡಿ. ಮಾನಸಿಕ ಒತ್ತಡ ಹೆಚ್ಚಳವಾಗಲಿದೆ.
ಧನು ರಾಶಿ: ಹಣ ಆಗಮನದ ಲಕ್ಷಣವಿದೆ. ಆರೋಗ್ಯ ಸರಿಯಾಗಿರಲಿದೆ. ಮನರಂಜನೆಗೆ ಸಮಯ ಕೊಡಿ.
ಮಕರ ರಾಶಿ: ಪ್ರೀತಿ-ಪ್ರೇಮದ ವಿಷಯದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಬೆಳವಣಿಗೆ ಆಗಲಿದೆ. ಸೃಜನಶೀಲ ಕೆಲಸ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ.
ಕುಂಭ ರಾಶಿ: ಕಷ್ಟಗಳನ್ನು ಸರಿಯಾಗಿ ಎದುರಿಸಿದಾಗ ಫಲ ಸಿಗುತ್ತದೆ. ಶಿಸ್ತು ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿ. ಹಣಕಾಸು ವಿಷಯದಲ್ಲಿ ನಿಧಾನವಾದ ಬೆಳವಣಿಗೆ ಆಗಲಿದೆ.
ಮೀನ ರಾಶಿ: ನ್ಯಾಯ ನಿಮ್ಮ ಪರವಾಗಿದೆ. ಹೊಟ್ಟೆ ಹಾಗೂ ಉಸಿರಾಟದ ಸಮಸ್ಯೆ ಎದುರಾದರೆ ವೈದ್ಯರನ್ನು ಭೇಟಿ ಮಾಡಿ. ನಿಮ್ಮಲ್ಲಿನ ಗುಪ್ತ ವಿಷಯಗಳು ನಿಮ್ಮೊಳಗೆ ಇರಲಿ.
