ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಯಲ್ಲಿದ್ದು, ಈ ಬಾರಿ ರಿಲಯನ್ಸ್ ಜನರಲ್ ಇನ್ಯುರೆನ್ಸ್ ಕಂಪನಿ ಈ ಯೋಜನೆಯ ಉಸ್ತುವಾರಿವಹಿಸಿದೆ. ಪ್ರಾಕೃತಿಕ ವಿಕೋಪದ ನಷ್ಟದಿಂದ ರೈತರು ಪಾರಾಗಲು ಪ್ರತಿಯೊಬ್ಬರೂ ಯೋಜನೆ ಅಡಿ ವಿಮೆ ಮಾಡಿಸುವುದು ಉತ್ತಮ ಎಂದು ಕಂಪನಿ ಹೇಳಿದೆ.
ಅಡಿಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆದ ರೈತರು ವಿಮಾ ಸೌಲಭ್ಯಕ್ಕೆ ಅರ್ಹರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನದಲ್ಲಿದೆ. ಬೆಳೆ ಸಾಲಪಡೆಯುವವರ ಜೊತೆ ಹಾಗೂ ಬೆಳೆ ಸಾಲಪಡೆಯದ ರೈತರಿಗೂ ಈ ಯೋಜನೆಯಲ್ಲಿ ನೊಂದಾಯಿಸಲ್ಪಡುವ ಅವಕಾಶವಿದೆ.
ಈ ಹಿಂದಿನ ಪ್ರಕಟಣೆಯಂತೆ ರೈತರು ವಿಮಾ ಕಂತನ್ನು ಪಾವತಿಸಲು ಅಗಸ್ಟ 11 ಕೊನೆಯ ದಿನವಾಗಿದ್ದು, ರೈತರ ಹಿತಾಸಕ್ತಿ ಮೇರೆಗೆ ಬೆಳೆ ಸಾಲ ಪಡೆಯುವ ರೈತರಿಗೆ ಅಗಸ್ಟ 30ವರೆಗೆ ಅವಧಿ ವಿಸ್ತರಿಸಲಾಗಿದೆ.
