ಕೇರಳದ ಹರಿ ಭಾನುದಾಸ್ ಅವರನ್ನು ಕಸ್ಟಂ ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿದ ಡಕಾಯಿತರು ಅವರ ಬಳಿಯಿದ್ದ ಚಿನ್ನವನ್ನು ಅಪಹರಿಸಿದ್ದಾರೆ. ಅದಾದ ನಂತರ ಹರಿಭಾನುದಾಸ್ ಅವರನ್ನು ಶಿರಸಿ-ಕುಮಟಾ ರಸ್ತೆಯ ಅಂತರವಳ್ಳಿ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಅಗಸ್ಟ 13ರ ಬೆಳಗ್ಗೆ 7ಗಂಟೆಗೆ ಕೇರಳದ ಹರಿ ಭಾನುದಾಸ್ ಅವರು ಮಂಗಳೂರು ರೈಲ್ವೆ ನಿಲ್ದಾಣದ ಬಳಿ ಇದ್ದರು. ಅಲ್ಲಿ ರಿಕ್ಷಾಗಾಗಿ ಕಾಯುತ್ತಿದ್ದ ಅವರ ಬಳಿ 350 ಗ್ರಾಂ ಚಿನ್ನದ ಗಟ್ಟಿಯಿದ್ದು, ಅದನ್ನು ದರೋಡೆಕೋರರು ನೋಡಿದ್ದರು. ತಮ್ಮನ್ನು ತಾವು `ಕಸ್ಟಂ ಅಧಿಕಾರಿ’ ಎಂದು ಪರಿಚಯಿಸಿಕೊಂಡ 6 ಜನ `ನಿಮ್ಮನ್ನು ತಪಾಸಣೆ ಮಾಡಬೇಕು’ ಎಂದು ಹರಿ ಭಾನುದಾಸ್ ಅವರನ್ನು ಗದರಿಸಿದರು.
ಆ ಆರು ಜನ ಒತ್ತಾಯಪೂರ್ವಕವಾಗಿ ಹರಿ ಭಾನುದಾಸ್ ಅವರನ್ನು ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ತುಂಬಿಕೊAಡು ಕುಮಟಾ ಕಡೆ ಬಂದರು. ಅವರ ಬಳಿಯಿದ್ದ ಚಿನ್ನದ ಗಟ್ಟಿಯನ್ನು ಕಿತ್ತುಕೊಂಡು ಕಾರಿನಿಂದ ಹೊರ ದಬ್ಬಿದರು. ಶಿರಸಿ-ಕುಮಟಾ ಕಾಡಂಚಿನ ಪ್ರದೇಶವಾದ ಅಂತ್ರವಳ್ಳಿಯಲ್ಲಿ ಬಿದ್ದ ಹರಿ ಭಾನುದಾಸ್ ಅವರು ಪೊಲೀಸ್ ಠಾಣೆಗೆ ಹೋಗಿ ತಮಗಾದ ಅನ್ಯಾಯ ಹೇಳಿದರು.
ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಕಾಯಿತರ ಹುಡುಕಾಟ ಶುರು ಮಾಡಿದ್ದಾರೆ.
