ಧಾರಾಕಾರ ಮಳೆಗೆ ಶಿರಸಿಯ ಬಂಕನಾಳದಲ್ಲಿರುವ ದಾಕ್ಷಾಯಣಿ ನಾಯ್ಕ ಅವರ ಮನೆ ಕುಸಿದಿದೆ. ಈ ವಿಷಯ ಅರಿತ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅಲ್ಲಿ ಧಾವಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
ಮಳೆಯಲ್ಲಿ ಮನೆ ಕಳೆದುಕೊಂಡವರು ಕೊಟ್ಟಿಗೆಯಲ್ಲಿ ತಾಡಪಲ್ ಹಾಕಿಕೊಂಡು ವಾಸಿಸುತ್ತಿದ್ದಾರೆ. ಒಂದು ವಾರ ಕಳೆದರೂ ಅವರಿಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಕಂದಾಯ ಅಧಿಕಾರಿಗಳು ಭೇಟಿ ನೀಡಿದರೂ ಅದರಿಂದ ಪ್ರಯೋಜನವಾಗಿಲ್ಲ. ಇದಕ್ಕೆ ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದರು.
`ಬಡವರ ಮನೆ ಬಿದ್ದಾಗ ಸರ್ಕಾರ ಭಿಕ್ಷೆ ನೀಡುವಂತೆ 1 ಲಕ್ಷ ರೂ ಪರಿಹಾರ ನೀಡುತ್ತದೆ. ಆ ಹಣ ಶೌಚಾಲಯ ಕಟ್ಟಲು ಸಾಲುವುದಿಲ್ಲ. ಬಿಜೆಪಿ ಸರ್ಕಾರ ಮನೆ ಬಿದ್ದರೆ 5 ಲಕ್ಷ ರೂ ಪರಿಹಾರ ನೀಡಿದ ಉದಾಹರಣೆಯಿದ್ದು, ಈಗಿನ ಸರ್ಕಾರ ವಿಶೇಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಪ್ರಮುಖರಾದ ರಮೇಶ ನಾಯ್ಕ ಕುಪ್ಪಳ್ಳಿ ಮಂಜುನಾಥ ನಾಯ್ಕ ಮರಿಗುಡ್ಡೆ, ನಾಗೇಂದ್ರ ಗೌಡ ಇತರರಿದ್ದರು.
