ಶಿರಸಿ ಗಾಂಧಿನಗರ ಸಂಪಿಗೆ ಕೆರೆ ಸಮೀಪದ ಮನೆಯೊಂದಕ್ಕೆ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ 3 ಲಕ್ಷ ರೂಪಾಯಿಗೂ ಅಧಿಕ ಗೃಹ ಉಪಯೋಗಿ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.
ರೇಷ್ಮಾ ಸೈಮನ್ ಡಿಸೋಜಾ ಅವರ ಮನೆಗೆ ಗುರುವಾರ ಬೆಳಗ್ಗೆ ಬೆಂಕಿ ತಗುಲಿದೆ. ಅವಘಡಕ್ಕೆ ವಿದ್ಯುತ್ ಸಮಸ್ಯೆ ಕಾರಣ ಎಂಬ ಮಾಹಿತಿಯಿದೆ. ಅದಾಗಿಯೂ ಮನೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಸುಟ್ಟಿದ್ದರಿಂದ ರೇಷ್ಮಾ ಸೈಮನ್ ಡಿಸೋಜಾ ಕುಟುಂಬದವರು ಕಂಗಾಲಾಗಿದ್ದಾರೆ.
ಬೆಂಕಿ ಉರಿಯುವುದನ್ನು ನೋಡಿದ ಸ್ಥಳೀಯರು ಅದನ್ನು ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯೂ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಗ್ರಾಮ ಆಡಳಿತ ಅಧಿಕಾರಿ ಪಲ್ಲವಿ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.
