`ಶಿರಸಿ-ಸಿದ್ದಾಪುರ ಭಾಗದ ದಟ್ಟ ಅರಣ್ಯದಲ್ಲಿ ಹಾದು ಹೋದ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಮುಖ್ಯರಸ್ತೆ ಅಂಚಿನಲ್ಲಿ ಸ್ಥಳಾಂತರಿಸಬೇಕು’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.
`ಶಿರಸಿ ಕ್ಷೇತ್ರ ಮಲೆನಾಡು ಪ್ರದೇಶವಾಗಿದ್ದು, ದಟ್ಟ ಅರಣ್ಯದಿಂದ ಕೂಡಿದೆ. ಮಳೆ ಶುರವಾದರೆ ಹಳ್ಳಿ ಭಾಗದ ವಿದ್ಯುತ್ ಲೈನ್ ಮೇಲೆ ಮರ ಬೀಳುತ್ತದೆ. ಇದರಿಂದ ವಾರಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಅರಣ್ಯ ಪ್ರದೇಶದ ಲೈನ್ ರಸ್ತೆ ಬದಿ ಸ್ಥಳಾಂತರ ಮಾಡಿದರೆ ಗ್ರಾಮೀಣ ಜನರಿಗೆ ನಿರಂತರ ಬೆಳಕು ನೀಡಲು ಸಹಕಾರಿಯಾಗುತ್ತದೆ’ ಎಂದವರು ಸದನಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ ಜೆ ಜಾರ್ಜ `ಉತ್ತರ ಕನ್ನಡ ಜಿಲ್ಲೆ 174ಕಿಮೀ ಹೈಟೆನ್ಸನ್ ತಂತಿ ಹೋಗಿದೆ. 592ಕಿಮೀ ಎಲ್ ಟಿ ಲೈನ್ ಎಳೆಯಲಾಗಿದೆ. 7ಕಿಮೀ ತಂತಿಯ ಮೇಲೆ ಪದೇ ಪದೇ ಮರ ಬಿದ್ದು ತೊಂದರೆ ಆಗುತ್ತಿದ್ದು, ಅದನ್ನು ಸ್ಥಳಾಂತರಿಸಲಾಗಿದೆ. 58ಕಿಮೀ ದೂರದ ತಂತಿ ಸ್ಥಳಾಂತರಕ್ಕೆ ಗುರುತು ಮಾಡಲಾಗಿದೆ. ಅದರಲ್ಲಿ 9 ಕಿಮೀ ಸ್ಥಳಾಂತರ ಕ್ರಮ ಜರುಗಿಸಲಾಗುತ್ತದೆ’ ಎಂದು ಉತ್ತರಿಸಿದರು.
