ಮುoಡಗೋಡ ವೀರಾಪುರದ ಸಣ್ಣಹನುಮಂತ ಬೋವಿವಡ್ಡರ್ ಅವರ ಕಣ್ಣಿಗೆ ಅವರ ಅಕ್ಕನಮಗ ವೀರಾಪುರದ ಅಣಪ್ಪ ಕುರುವತ್ತಿ ಖಾರದಪುಡಿ ಎರೆಚಿದ್ದಾರೆ. ಅದಾದ ನಂತರ ಬಡಿಗೆಯಿಂದ ಅವರನ್ನು ಬಡಿದಿದ್ದಾರೆ!
ಸಣ್ಣಹನುಮಂತ ಅವರ ಹೋರಿ ಅಣ್ಣಪ್ಪ ಅವರ ಹೊಲಕ್ಕೆ ಮೇಯಲು ಹೋಗಿದ್ದೇ ಈ ಹೊಡೆದಾಟಕ್ಕೆ ಕಾರಣ. ಅಣಪ್ಪ ಕುರುವತ್ತಿ ಅವರು ಭತ್ತ ಬೆಳೆದಿದ್ದು, ಸಣ್ಣಹನುಮಂತ ಬೋವಿವಡ್ಡರ್ ಅವರು ಸಾಕಿದ ಹೋರಿ ಗಡಿ ಮಿತಿಯ ಅರಿವಿಲ್ಲದೇ ಪಕ್ಕದ ಹೊಲಕ್ಕೆ ಹೋಗಿತ್ತು. ಅಲ್ಲಿ ಬೆಳೆಯಲಾದ ಭತ್ತವನ್ನು ಆಹಾರವನ್ನಾಗಿಸಿಕೊಂಡಿತ್ತು.
ಅಗಸ್ಟ 7ರಂದು ಹೋರಿ ಭತ್ತ ತಿಂದಿದನ್ನು ನೋಡಿದ ಅಣಪ್ಪ ಕುರುವತ್ತಿ ಆ ದಿನವೇ ತರಕಾರು ಮಾಡಿದ್ದರು. ಕೊನೆಗೆ ಅದೇ ದಿನ ರಾತ್ರಿ ತನ್ನ ಇಬ್ಬರು ಸಹಚರರ ಜೊತೆ ಸಣ್ಣಹನುಮಂತ ಬೋವಿವಡ್ಡರ್ ಅವರ ಮನೆ ಬಾಗಿಲು ತಟ್ಟಿದ್ದರು. ಮನೆಯಿಂದ ಹೊರ ಬಂದ ಸಣ್ಣಹನುಮಂತ ಬೋವಿವಡ್ಡರ್ ಅವರ ಕಣ್ಣಿಗೆ ಖಾರದಪುಡಿ ಎರಚಿ ಜಗಳ ಮಾಡಿದ್ದರು.
ಅದಾದ ನಂತರ ಇಬ್ಬರು ಸಹಚರರ ಜೊತೆ ಅಣಪ್ಪ ಕುರುವತ್ತಿ ಅವರು ಬಡಿಗೆಯಿಂದ ಸಣ್ಣಹನುಮಂತ ಬೋವಿವಡ್ಡರ್ ಅವರನ್ನು ಹೊಡೆದರು. ಉಳಿದ ಇಬ್ಬರು ಅವರನ್ನು ಹಿಡಿದು ಥಳಿಸಿದರು. ಎಲ್ಲರೂ ಸೇರಿ `ಮತ್ತೆ ಹೋರಿಯನ್ನು ಹೊಲಕ್ಕೆ ಬಿಟ್ಟರೆ ಹುಷಾರು’ ಎಂದು ಎಚ್ಚರಿಸಿದರು. ಪೆಟ್ಟು ತಿಂದ ಸಣ್ಣಹನುಮಂತ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿ, ಅಕ್ಕನ ಮಗನ ವಿರುದ್ಧ ಪ್ರಕರಣ ದಾಖಲಿಸಿದರು.
Discussion about this post