ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಿದ್ದ ದಾಂಡೇಲಿಯ ಗುತ್ತಿಗೆದಾರ ವಿನಾಯಕ ಎಂಡ್ರೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅದಾದ ನಂತರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ವಿನಾಯಕ ಎಂಡ್ರೆ ಅವರು ಸಿಗರೇಟಿನ ಸೀಸದಲ್ಲಿ ಗಾಂಜಾ ಹಾಕಿ ಸೇವಿಸಿರುವುದು ಗೊತ್ತಾಗಿದೆ.
ದಾಂಡೇಲಿಯ ಟೌನ್ಶಿಫ್’ನಲ್ಲಿರುವ ವಿನಾಯಕ ಎಂಡ್ರೆ ಅವರು ಅಲ್ಲಿ-ಇಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅಗಸ್ಟ 14ರಂದು ಅಂಬೆವಾಡಿ ರೈಲು ನಿಲ್ದಾಣದ ಬಳಿ ತೆರಳಿದ್ದ ಅವರು ಅಲ್ಲಿ ಸಿಗರೇಟು ಸೇದುತ್ತ ನಿಂತಿದ್ದರು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದದ ಬಗ್ಗೆ ಪಿಎಸ್ಐ ಕಿರಣ ಪಾಟೀಲ್ ಅವರು ವಿನಾಯಕ ಎಂಡ್ರೆ ಅವರಿಗೆ ಬುದ್ದಿಮಾತು ಹೇಳಿದರು.
ವಿನಾಯಕ ಎಂಡ್ರೆ ಅವರು ಮಾತನಾಡುವ ವೇಳೆ ತೊದಲಿದ್ದು, ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ವಿನಾಯಕ ಎಂಡ್ರೆ ನಶೆಯಲ್ಲಿರುವ ಹಾಗೇ ಕಾಣಿಸಿತು. ಹೀಗಾಗಿ ಅರ್ದ ಸೇದಿದ ಸಿಗರೇಟನ್ನು ಪೊಲೀಸರು ವಶಕ್ಕೆಪಡೆದರು. ವಿನಾಯಕ ಎಂಡ್ರೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ದಾಂಡೇಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ ವಿನಾಯಕ ಎಂಡ್ರೆ ಅವರು ಗಾಂಜಾ ಸೇವಿಸಿರುವುದು ದೃಢವಾಯಿತು.
ಸಿಗರೇಟಿನ ಸೀಸದಲ್ಲಿ ಗಾಂಜಾ ಹಾಕಿ ಸೇವಿಸುತ್ತಿದ್ದ ಕಾರಣ ವಿನಾಯಕ ಎಂಡ್ರೆ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು. ಸಿಗರೇಟಿನ ಪ್ಯಾಕೇಟ್, ಬೆಂಕಿ ಪೊಟ್ಟಣ, ಗಾಂಜಾ ಸೇವನೆಗೆ ಬಳಸುವ ಒಸಿಬಿ ಕಾಗದವನ್ನು ಪೊಲೀಸರು ವಶಕ್ಕೆಪಡೆದರು.
`ನೆಮ್ಮದಿಯ ಬದುಕಿಗಾಗಿ ಮಾದಕ ವ್ಯಸನದಿಂದ ದೂರವಿರಿ’
Discussion about this post