`ಬ್ರಿಟಿಷರ ದಾಸ್ಯದಿಂದ ಮುಕ್ತವಾದ ನಂತರ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಇದೀಗ ವಿಶ್ವ ಗುರು ಸ್ಥಾನದಲ್ಲಿ ಕಂಗೊಳಿಸುತ್ತಿದೆ’ ಎಂದು ಕಾರವಾರದ ಅಮದಳ್ಳಿಯಲ್ಲಿರುವ ಎಜುಕೇರ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯಾಧ್ಯಾಪಕಿ ನಾಗರತ್ನ ಅವರು ಹೇಳಿದ್ದಾರೆ.
79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು `ಸ್ವತಂತ್ರ ನಂತರ ಎಂಟು ದಶಕಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಉತ್ತಮ ಸಂವಿಧಾನಿಕ ವ್ಯವಸ್ಥೆ, ದೇಶದ ರಕ್ಷಣಾ ವ್ಯವಸ್ಥೆ ಜೊತೆ ಸಂಸ್ಕಾರ ಹಾಗೂ ಮೌಲ್ಯಾಧಾರಿದ ಶಿಕ್ಷಣ ಇದಕ್ಕೆ ಕಾರಣ’ ಎಂದವರು ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಿದ್ದು, ಚಿಣ್ಣರು ಅದರಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ವಿವಿಧ ವೇಷ ಭೂಷಣಗಳೊಂದಿಗೆ ಗಮನಸೆಳೆದರು. ದೇಶಭಕ್ತಿ ಗೀತೆ ಹಾಗೂ ಭಾಷಣಗಳನ್ನು ಪ್ರಸ್ತುತಪಡಿಸಿದರು. ಶಿಕ್ಷಕರಾದ ಸವಿತಾ, ವಿನೋದ್ ಆಲ್ಮೇಡ, ದೀಪ ನಾಯ್ಕ, ವಿಶ್ವನಾಥ್ ಗೌಡ ಮೊದಲಾದವರು ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು.
