ಕಾರವಾರದ ಮುದುಗಾದಲ್ಲಿರುವ ಜನತಾ ವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ಸನ್ಮಾನಿಸಲಾಗಿದೆ. ಆ ಮೂಲಕ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸೈನಿಕರ ಜೀವನ ಪರಿಚಯಿಸುವ ಕೆಲಸ ಮಾಡಲಾಗಿದೆ.
ಮಾಜಿ ಸೈನಿಕರಾದ ವಿಜಯ ಕಾರ್ವಿ ಮತ್ತು ಅಜಿತ ದುರ್ಗೆಕರ್ ಅವರು ಸನ್ಮಾನ ಸ್ವೀಕರಿಸಿದರು. ನಂತರ ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಸಮಯಪ್ರಜ್ಞೆಯ ಕುರಿತು ಅವರು ಅರಿವು ಮೂಡಿಸಿದರು. ವಿದ್ಯಾಥಿಗಳು ದೇಶಭಕ್ತಿ ಗೀತೆಗಳ ಗಾಯನ ಹಾಗೂ ಭಾಷಣಗಳನ್ನು ಪ್ರಸ್ತುತಪಡಿಸಿದರು. ಸ್ವಾತಂತ್ರ ಹೋರಾಟಗಾರರ ವೇಷ ಭೂಷಣದ ಜೊತೆ ಸ್ಪರ್ಧೆಗೆ ಬಂದ ಮಕ್ಕಳು ಎಲ್ಲರ ಗಮನ ಸೆಳೆದರು.
ದ್ವಜಾರೋಹಣ ನೆರವೇರಿಸಿದ ಶಾಲಾ ಮುಖ್ಯಾಧ್ಯಾಪಕಿ ವೀಣಾ ಮಾಳಿಗೆರ ಅವರು `ಪ್ರತಿ ಮನೆ ಮನೆಯಲ್ಲಿಯೂ ಹಬ್ಬದ ರೀತಿ ಸ್ವಾತಂತ್ರ ಉತ್ಸವ ಆಚರಿಸಬೇಕು’ ಎಂದು ಕರೆ ನೀಡಿದರು. ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಐಶ್ವರ್ಯ ಹರಿಕಂತ್ರ, ತೃಪ್ತಿ ಕಾಶಿನಾಥ್ ಮತ್ತು ಸಾನಿಕ ಅವರನ್ನು ಈ ವೇಳೆ ಗೌರವಿಸಿದರು.
ಶಿಕ್ಷಕ ಜೈರಂಗನಾಥ ಅವರು ಆಗಮಿಸಿದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ನಾಗರಾಜ್ ಗೌಡ ಅವರು ಧ್ವಜವಂದನೆ ಕಾರ್ಯಕ್ರಮದ ಜವಾಬ್ದಾರಿ ನಡೆಸಿಕೊಟ್ಟರು. ಪ್ರಮುಖರಾದ ಸ್ಮಿತಾ ನಾಯ್ಕ, ನಿಕಿತಾ ನಾಯ್ಕ, ವಿಟ್ಟಲ್ ಗಾಡ್, ಶ್ವೇತಾ ಪಕಿರೇಶ ಜೊತೆ ಊರಿನವರಾದ ಜ್ಞಾನೇಶ್ವರ ಹರಿಕಂತ್ರ, ದೇವರಾಜ್, ಜಾನು, ನಿತೇಶ್ ತಾಂಡಲ್, ಹರಿಶ್ಚಂದ್ರ ತಾಂಡೇಲ್, ಶ್ರೀಧರ ತಾಂಡೇಲ್ ಇನ್ನಿತರರು ಈ ಸಡಗರದಲ್ಲಿ ಭಾಗಿಯಾದರು.
