ಕಾರವಾರ ಶಾಸಕ ಸತೀಶ್ ಸೈಲ್ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕಂತೆ ಕಂತೆ ದುಡ್ಡು ಸಿಕ್ಕಿದೆ. ಆ ದುಡ್ಡಿನಲ್ಲಿಯೇ ಬಳಸಿ ED ಎಂದು ಬರೆದ ಅಧಿಕಾರಿಗಳು ಆ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊoಡಿದ್ದಾರೆ.
ಬುಧವಾರ ಕಾರವಾರದ ಸದಾಶಿವಗಡದಲ್ಲಿರುವ ಸತೀಶ್ ಸೈಲ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ಮನೆ ಶೋಧ ಮಾಡಿದ್ದರು. ಈ ವೇಳೆ ಶಾಸಕ ಸತೀಶ್ ಸೈಲ್ ಮನೆಯಲ್ಲಿ 1.68 ಕೋಟಿ ರೂ ಹಣ ಸಿಕ್ಕಿತ್ತು. ಇದರೊಂದಿಗೆ 6,20,45,319 ರೂ. ಮೌಲ್ಯದ 6.75 ಕೆಜಿ ಚಿನ್ನವನ್ನು ಇಡಿ ಅಧಿಕಾರಿಗಳು ಜಪ್ತು ಮಾಡಿದರು.
ಸತೀಶ್ ಸೈಲ್ ಮನೆಯಲ್ಲಿ ಸಿಕ್ಕ ಹಣದಿಂದಲೇ `ED ಎಂದು ಇಂಗ್ಲಿಷ್ ಪದ ಬಳಸಿ ಬರೆದ ಅಧಿಕಾರಿಗಳು ಅದನ್ನು ತಮ್ಮ ಎಕ್ಸ ಖಾತೆಯಲ್ಲಿ ಹಂಚಿಕೊ0ಡಿದ್ದಾರೆ. ಶಾಸಕ ಸತೀಶಾ ಸೈಲ್ ಅವರ ಬ್ಯಾಂಕ್ ಖಾತೆಯನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ. 2 ಟ್ರಂಕ್ ಮೂಲಕ ಚಿನ್ನ, ಹಣವನ್ನು ಅವರು ಕೊಂಡೊಯ್ದಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಅಕ್ರಮ ಅದಿರು ರಪ್ತು ಆರೋಪದ ಅಡಿ ಸತೀಶ್ ಸೈಲ್ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಕರಣ ದಾಖಲಿಸಿದ್ದರು. ಸತೀಶ್ ಸೈಲ್’ಗೆ ಜನಪ್ರತಿನಿಧಿ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟಿನಿಂದ ಜಾಮೀನುಪಡೆದು ಹೊರಗಿದ್ದ ಅವರಿಗೆ ಇದೀಗ ಇಡೀ ಶಾಕ್ ನೀಡಿದೆ.





Discussion about this post