ಶಿರಸಿಯ ಬನವಾಸಿಯಲ್ಲಿ ನೂತನವಾಗಿ ಶುರುವಾಗಿರುವ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದು, ಸ್ವಾತಂತ್ರ ಹೋರಾಟಗಾರರ ವೇಷ-ಭೂಷಣ ಧರಿಸಿ ಕಂಗೊಳಿಸಿದರು.
ಶಾಲೆಯ ಪ್ರಭಾರ ಮುಖ್ಯಾಧ್ಯಾಪಕಿ ಅಕ್ಷತಾ ಕೋಟಿ ಅವರು ಧ್ವಜಾರೋಹಣ ಮಾಡಿದರು. `ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಮತ್ತು ದೇಶಭಕ್ತಿ ಜಾಗೃತಗೊಳಿಸುವಲ್ಲಿ ಶಿಕ್ಷಣದ ಪಾತ್ರ ಅತಿ ಮುಖ್ಯ. ಬಾಲ್ಯದಲ್ಲಿ ಕಲಿತ ವಿದ್ಯೆ ಜೀವನ ಪರ್ಯಂತ ಶಾಶ್ವತವಾಗಿರುತ್ತದೆ. ಸಂಸ್ಕಾರಯುತ ಶಿಕ್ಷಣಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಸ್ವಾತಂತ್ರ ಹೋರಾಟಗಾರರ ಜೀವನ ಸ್ಪೂರ್ತಿ ನೀಡುತ್ತದೆ’ ಎಂದವರು ಹೇಳಿದರು.
`ಎಜುಕೇರ್ ಶಾಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಸಿಗುತ್ತಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದವರು ಈ ವೇಳೆ ಹೇಳಿದರು. ಶಾಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದರು. ಶಾಲೆಯ ಸಂಯೋಜಕ ನಾಗರಾಜ, ಶಿಕ್ಷಕರಾದ ಸುಧಾ ಹೀರೇಮಠ್, ದೀಪಶ್ರೀ. ಮೇಘನಾ, ಸಹನಾ, ಪವೀತ್ರ, ಶೋಭಾ, ಮಾನಸ ಇತರರು ಕಾರ್ಯಕ್ರಮ ಸಂಘಟಿಸಿದ್ದರು.
