ಮೇಷ ರಾಶಿ: ಇಡೀ ದಿನ ಉತ್ಸಾಹದಲ್ಲಿರುತ್ತೀರಿ. ಹೊಸ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ದಿನ. ಪ್ರತಿಭೆಗೆ ತಕ್ಕ ಬೆಲೆ ಸಿಗಲಿದೆ. ಹಣಕಾಸು ವಿಷಯದಲ್ಲಿ ಎಚ್ಚರ ಅಗತ್ಯ.
ವೃಷಭ ರಾಶಿ: ವಾಹನ, ವಸತಿ ವಿಷಯದಲ್ಲಿ ಅಡಚಣೆ ಬರಲಿದೆ. ಅಡಚಣೆಗಳನ್ನು ಸಮರ್ಥವಾಗಿ ಎದುರಿಸಿ. ಹೊಸ ಉದ್ದಿಮೆ, ಬಂಡವಾಳ ಹೂಡಿಕೆಗೆ ಯೋಗ್ಯ ದಿನ.
ಮಿಥುನ ರಾಶಿ: ಅನೇಕ ದಿನಗಳ ಯೋಜನೆಗೆ ಈ ದಿನ ನೆರವು ಸಿಗಲಿದೆ. ಹಣಕಾಸು ವಿಷಯ ಕ್ರಮಬದ್ಧವಾಗಿರಲಿ. ಸಮಸ್ಯೆಗಳು ದೂರವಾಗಲಿದೆ.
ಕರ್ಕ ರಾಶಿ: ಭಾವನಾತ್ಮಕ ಮಾತುಕತೆಯಿಂದ ಒಳ್ಳೆಯ ಕೆಲಸ ಆಗಲಿದೆ. ಆರೋಗ್ಯ ಚಿಕಿತ್ಸೆ ವಿಷಯದಲ್ಲಿ ನಿರುತ್ಸಾಹ ಬೇಡ. ಮನಸ್ಸಿನ ಒತ್ತಡ ದೂರವಾಗಿ ನೆಮ್ಮದಿ ಸಿಗಲಿದೆ.
ಸಿಂಹ ರಾಶಿ: ಕುಟುಂಬದ ಜವಾಬ್ದಾರಿ ಹೆಚ್ಚಲಿದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಸಹಜ. ಕೆಲಸಕ್ಕೆ ತಕ್ಕ ಫಲವೂ ಸಿಗಲಿದೆ.
ಕನ್ಯಾ ರಾಶಿ: ಜನ ಸಂಪರ್ಕ ಹೆಚ್ಚಳದಿಂದ ಸಾಮಾಜಿಕ ಮನ್ನಣೆ ಸಿಗಲಿದೆ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ಬೇಕು. ಆಪ್ತರ ಸಹಾಯ ನಿಮಗೆ ಅನುಕೂಲ ಮಾಡಿಕೊಡಲಿದೆ.
ತುಲಾ ರಾಶಿ: ಪ್ರೀತಿ ಹಾಗೂ ಸ್ನೇಹದ ವಿಷಯವನ್ನು ನಿರ್ಲಕ್ಷಿಸಬೇಡಿ. ವಿವಾದಗಳು ದೂರ ಆಗಲಿದೆ. ಭಯ ಬೇಡ.
ವೃಶ್ಚಿಕ ರಾಶಿ: ಆರ್ಥಿಕ ಲಾಭ ಆಗಲಿದೆ. ಹೊಸ ದಾರಿ ತೆರೆದುಕೊಳ್ಳಲಿದೆ. ಉದ್ಯೋಗದಲ್ಲಿ ಸಾಧನೆ ಸಾಧ್ಯ.
ಧನು ರಾಶಿ: ನಿತ್ಯದ ಕೆಲಸದಲ್ಲಿ ಕೌಶಲ್ಯ ಅಳವಡಿಸಿಕೊಳ್ಳಿ. ಒತ್ತಡ ನಿವಾರಣೆಗೆ ಬೇರೆ ದಾರಿ ಹುಡುಕಿ. ಸ್ಪರ್ಧಾತ್ಮಕ ವಿಷಯಗಳ ಕಡೆ ಒಲವು ಅಗತ್ಯ. ಕುಟುಂಬದಲ್ಲಿ ಶಾಂತಿ ಸಿಗಲಿದೆ.
ಮಕರ ರಾಶಿ: ಹಣಕಾಸು ವ್ಯವಹಾರದಲ್ಲಿ ಜಾಗೃತರಾಗಿರಿ. ವೃತ್ತಿ ವಿಷಯದಲ್ಲಿ ಒತ್ತಡ ಸಹಜ. ಬೆಳಗ್ಗೆ ನಿರಾಸೆಯಾದರೂ ಮಧ್ಯಾಹ್ನದ ವೇಳೆಗೆ ಖುಷಿ ಸಿಗಲಿದೆ.
ಕುಂಭ ರಾಶಿ: ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಬದಲಾವಣೆ ಆಗಲಿದೆ. ಹೊಸ ಸ್ನೇಹಿತರು ಸಿಗಲಿದ್ದಾರೆ. ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಿ.
ಮೀನ ರಾಶಿ: ನಿಮ್ಮೊಳಗಿನ ಭಾವನೆಯನ್ನು ಕುಟುಂಬದವರ ಜೊತೆ ಚರ್ಚಿಸಿ. ಆರೋಗ್ಯ ವಿಷಯದಲ್ಲಿ ಎಚ್ಚರವಹಿಸಿ. ಸಮಸ್ಯೆಗೆ ಸ್ಪಂದಿಸಿ, ನಿರ್ಧಾರ ಕೈಗೊಳ್ಳಿ.
Discussion about this post