ಅನೇಕ ಪರಿಸರ ಹೋರಾಟದಲ್ಲಿ ತೊಡಗಿರುವ ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇ0ದ್ರ ಸರಸ್ವತಿ ಶ್ರೀಗಳು ತಮ್ಮಲ್ಲಿ ಬರುವ ಭಕ್ತರಿಗೆ ಮಂತ್ರಾಕ್ಷತೆ ರೂಪದಲ್ಲಿ ಗಿಡಗಳನ್ನು ಕೊಡುತ್ತಿದ್ದಾರೆ. ಭಕ್ತರು ಆ ಗಿಡಗಳನ್ನು ಭಕ್ತಿಯಿಂದ ನೆಟ್ಟು ಪೋಷಿಸುತ್ತಿದ್ದಾರೆ.
ಇತಿಹಾಸದ ಪುಟ ತಿರುವಿದರೆ ಸ್ವರ್ಣವಲ್ಲೀ ಪೀಠವೇ ಪರಿಸರ ಸಂರಕ್ಷಣಾ ಪೀಠ ಎಂಬAತೆ ದಾಖಲಾಗಿದೆ. ಹಿಂದಿನ ಯತಿಗಳಾದ ಸರ್ವಜ್ಞೇಂದ್ರ ಸರಸ್ವತೀ ಶ್ರೀಗಳೂ ಪರಿಸರ ಕಾಳಜಿಹೊಂದಿದ್ದು ಇದಕ್ಕೆ ನಿದರ್ಶನ. 35 ವರ್ಷಗಳ ಹಿಂದೆ ಪೀಠಾರೋಹರಾದ ಗಂಗಾಧರೇ0ದ್ರ ಸರಸ್ವತೀ ಶ್ರೀಗಳಿಗೆ ಗಿಡ-ಮರಗಳು ಎಂದರೆ ಅಕ್ಕರೆ. ಹೀಗಾಗಿ 2006ರಿಂದಲೂ ಅವರು ಪರಿಸರ ಸಂದೇಶ ಸಾರುವ ಮಂತ್ರಾಕ್ಷತೆ ನೀಡುತ್ತ ಬಂದಿದ್ದಾರೆ. ಪ್ರತಿ ವರ್ಷ ಚಾತುರ್ಮಾಸ್ಯದಲ್ಲಿ ಆಶ್ರಮಕ್ಕೆ ಬರುವ ಶಿಷ್ಯರಿಗೆ ಗುರುಗಳು ವನಸ್ಪತಿ ವೃಕ್ಷ ಕೊಟ್ಟು ಹರಸುತ್ತಿದ್ದಾರೆ. ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಈಗಿನ ಕಿರಿಯ ಶ್ರೀಗಳಾದ ಆನಂದಬೋಧೇ0ದ್ರ ಸರಸ್ವತಿ ಶ್ರೀಗಳಿಗೂ ಪರಿಸರ ರಕ್ಷಣೆ ಕುರಿತು ಅಪಾರ ಒಲವಿದೆ.
ಸೋಂದಾ ಸ್ವಂಸ್ಥಾನದಲ್ಲಿ ವೃಕ್ಷಾರೋಪಣ, ಸಸ್ಯ ಲೋಕ ಸೃಷ್ಟಿ ಜೊತೆ ಕಾಡಿಗೆ ಅನುಕೂಲಕರ ವಾತಾವರಣ ಮೊದಲಿನಿಂದಲೂ ಇದೆ. ಅನೇಕ ಬಗೆಯ ಗಿಡ ಮೂಲಿಕೆ ಗಿಡಗಳನ್ನು ಇಲ್ಲಿ ಆರೈಕೆ ಮಾಡಲಾಗುತ್ತಿದೆ. ಸ್ವರ್ಣವಲ್ಲೀ ಶ್ರೀಗಳು ಚಾತುರ್ಮಾಸ್ಯ ಅವಧಿಯಲ್ಲಿ ಹಾಗೂ ಪೀಠಾರೋಹಣದ 25, 30 ವರ್ಷದ ಕಾಲಘಟ್ಟದಲ್ಲೂ ವೃಕ್ಷಾರೋಪಣವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರತಿ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ 5 ಸಾವಿರ ವನಸ್ಪತಿ ಗಿಡಗಳು ಭಕ್ತರಿಗೆ ಸಿಗುತ್ತಿದ್ದು, ಈ ವರ್ಷವೂ ಆ ಅಭಿಯಾನ ಮುಂದುವರೆದಿದೆ. ಬೇಡ್ತಿ ಹಾಗೂ ಅಘನಾಶಿನಿ ನದಿಗಳ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಳ್ಳುವ ಮೂಲಕ ಹಸಿರು ಪ್ರೀತಿ ತೋರಿದ್ದ ಸ್ವಾಮೀಜಿ ತಮ್ಮ ಪರಿಸರ ಜಾಗೃತಿಯನ್ನು ಎಂದಿಗೂ ಮರೆತಿಲ್ಲ. ವನಸ್ಪತಿ ಗಿಡಗಳ ಮಹತ್ವ, ಅವುಗಳ ಸಂರಕ್ಷಣೆ ಬಗ್ಗೆ ಶಿಷ್ಯರಲ್ಲಿಯೂ ಅವರು ಅರಿವು ಮೂಡಿಸುತ್ತಿದ್ದಾರೆ. ಕೇವಲ ಪ್ರವಚನಗಳಲ್ಲಿ ಮಾತ್ರ ಪರಿಸರ ಉಳಿಸಿ ಎಂದು ಹೇಳದೇ ಭಕ್ತರಿಗೆ ಗಿಡ ಕೊಟ್ಟು ಹುರಿದುಂಬಿಸುತ್ತಿದ್ದಾರೆ.
ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಸೇರಿ ವಿವಿಧ ಗಿಡಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಎಲ್ಲಾ ಗಿಡಗಳನ್ನು ಮಠದ ಸಸ್ಯ ಲೋಕದಲ್ಲಿಯೇ ಬೆಳಸಿ ಭಕ್ತರಿಗೆ ಕೊಡುವುದು ಇನ್ನೊಂದು ವಿಶೇಷ. ಕೆಲವೊಮ್ಮೆ ಭಕ್ತರ ಸಂಖ್ಯೆ ಹೆಚ್ಚಾಗಿ ಗಿಡ ಕಡಿಮೆ ಬಿದ್ದು, ಅರಣ್ಯ ಇಲಾಖೆಯಿಂದ ಗಿಡ ತರಿಸಿ ಕೊಟ್ಟಿದ್ದು ಇದೆ. `ಶ್ರೀಗಳು ಹರಿಸಿ ನೀಡಿದ ಗಿಡ ಸಂಪತ್ಬರಿತವಾಗಿದೆ’ ಎಂಬುದು ಭಕ್ತರ ಅಂಬೋಣ. `ಗಿಡಗಳನ್ನು ಶಿಷ್ಯರು ಪ್ರತಿ ವರ್ಷ ನೆಟ್ಟು ಬಳಸುತ್ತಿದ್ದಾರೆ. ಅದೇ ನಮಗೆ ಖುಷಿ’ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳುತ್ತಾರೆ.





Discussion about this post