ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರವಾರದ ವಿನೋದ ಖಾರ್ವಿ ಅವರು ಸಾವನಪ್ಪಿದ್ದಾರೆ. ಕರ್ತವ್ಯದಲ್ಲಿರುವಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಕಾರವಾರದ ಕೋಡಿಬಾಗದ ಸ್ವಾಮಿ ವಿವೇಕಾನಂದ ಹೈಸ್ಕೂಲ್ ಬಳಿ ವಿನೋದ ಖಾರ್ವಿ ಅವರ ಮನೆಯಿದೆ. ಅಲ್ಲಿನ ಪಂಚರಿಶಿವಾಡದಲ್ಲಿ ಬೆಳೆದು ದೊಡ್ಡವರಾದ ವಿನೋದ ಖಾರ್ವಿ ಅವರು ಬಾಲ್ಯದಲ್ಲಿಯೇ ದೇಶ ಸೇವೆಯ ಕನಸು ಕಂಡಿದ್ದರು. ನಿರಂತರ ಪ್ರಯತ್ನದ ಪರಿಣಾಮ ಅವರು ವಿಶಾಖಪಟ್ಟಣಂ ನೌಕಾಪಡೆಯಲ್ಲಿ ಕೆಲಸಕ್ಕೆ ಸೇರಿದ್ದರು.
ನೌಕಾಸೇನೆಯಲ್ಲಿ ಅವರು ಪಿಟಿ ಆಫಿಸರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಗಸ್ಟ 15ರ ಶುಕ್ರವಾರ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ಅವರು ಸಾವನಪ್ಪಿದರು. ಅಗಸ್ಟ 16ರ ಭಾನುವಾರ ಅವರ ಶವ ತವರಿಗೆ ಬರಲಿದೆ. ಬೆಳಗ್ಗೆ 9.30ಕ್ಕೆ ಕಾರವಾರದ ಕೋಡಿಬಾಗದ ಸ್ವಾಮಿ ವಿವೇಕಾನಂದ ಹೈಸ್ಕೂಲ್ ಬಳಿಯ ಪಂಚರಿಶಿವಾಡದ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಅದಾದ ನಂತರ ಕಾರವಾರದ ರುದ್ರಭೂಮಿಯಲ್ಲಿ ನೌಕಾಪಡೆಯವರಿಂದ ಸರಕಾರಿ ಗೌರವದೊಂದಿಗೆ ವಿನೋದ ಖಾರ್ವಿ ಅವರ ಅಂತ್ಯಕ್ರಿಯೆ ನಡೆಯಲಿದೆ.
Discussion about this post