ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆ ಆತ್ಮ ಯೋಜನೆ ಅಡಿ ಅಭ್ಯರ್ಥಿಗಳ ನೇಮಕಾತಿಗೆ ಅರ್ಹರ ಹುಡುಕಾಟ ನಡೆಸಿದೆ. ಸದ್ಯ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹುದ್ದೆ ಖಾಲಿ ಇದೆ.
ತಾಲೂಕ ತಾಂತ್ರಿಕ ವ್ಯವಸ್ಥಾಪಕ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗಾಗಿ ಅರ್ಜಿ ಕರೆಯಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಕಾತಿ ನಡೆಯಲಿದೆ. ಅಗಸ್ಟ 30ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನ.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬ0ಧಿತ ವಿಷಯದಲ್ಲಿ ಪದವಿ – ಸ್ನಾತಕೋತ್ತರ ಪದವಿ ಕಡ್ಡಾಯ. ಕನಿಷ್ಟ 1 ವರ್ಷ ಕೃಷಿ ಸಂಬoಧಿತ ಚಟುವಟಿಕೆಯಲ್ಲಿ ತೊಡಗಿದ ಅನುಭವವಿರಬೇಕು.
ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬAಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ. ಕೃಷಿ ಪದವಿಯೊಂದಿಗೆ 5 ವರ್ಷ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಅನುಭವವೂ ಬೇಕು. 2 ವರ್ಷ ಕೃಷಿ ಸಂಬAಧಿತ ಚಟುವಟಿಕೆಯಲ್ಲಿ ಭಾಗವಹಿಸಿರಿಸರಬೇಕು.
Discussion about this post