ಯಲ್ಲಾಪುರದ ಮುಂಡಗೋಡು ರಸ್ತೆಯಲ್ಲಿದ್ದ ಹೊಂಡಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ವಾಹನ ಸವಾರರ ಸಮಸ್ಯೆ ಮನಗಂಡು ಆ ಭಾಗದ ಸ್ಥಳೀಯರ ಜೊತೆ ಜನಪ್ರತಿನಿಧಿಗಳ ಸಹಯೋಗದಲ್ಲಿ ಹೊಂಡ ಮುಚ್ಚುವ ಕಾರ್ಯ ನಡೆದಿದೆ.
ಮುಂಡಗೋಡು ರಸ್ತೆ ತುಂಬ ಹೊಂಡ ಬಿದ್ದ ಬಗ್ಗೆ ಪ್ರಯಾಣಿಕರು ದೂರಿದ್ದರು. ಪಟ್ಟಣ ಪಂಚಾಯತ ಅಧಿಕಾರಿಗಳು ಹೊಂಡ ಮುಚ್ಚುವ ಬಗ್ಗೆ ಲೋಕೋಪಯೋಗಿ ಇಲಾಖೆಯನ್ನು ಕೇಳಿಕೊಂಡಿದ್ದರು. ಆದರೆ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಹೀಗಾಗಿ ಆ ಭಾಗದ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಅವರು ಪಟ್ಟಣ ಪಂಚಾಯತದ ಜೆಸಿಬಿ ಯಂತ್ರ ತಂದು ಹೊಂಡ ಮುಚ್ಚುವ ಕೆಲಸ ಶುರು ಮಾಡಿದರು. ಬಿಎಸ್‌ಎನ್‌ಎಲ್ ಎದುರು ದೊಡ್ಡ ಪ್ರಮಾಣದಲ್ಲಿದ್ದ ಹೊಂಡಗಳನ್ನು ಅವರು ಮುಚ್ಚಿಸಿದರು.
ಜೆಸಿಬಿ ಚಾಲಕ ವಿಜಯ ಯಂತ್ರದ ಮೂಲಕ ರಸ್ತೆ ಸಮದಟ್ಟು ಮಾಡಿದರು. ರವೀಂದ್ರ ನಗರದ ಸುರೇಶ ಸಿದ್ದಿ ಇತರರು ಸಹಕರಿಸಿದರು.
Discussion about this post