ಶಿರಸಿಯ ಬನವಾಸಿ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆದಿದ್ದು, ಅಲ್ಲಿ ನೆರೆದಿದ್ದ ಕೃಷ್ಣವೇಷಧಾರಿಗಳು ಮಡಿಕೆಯಲ್ಲಿದ್ದ ಬೆಣ್ಣೆ ಕದ್ದು ಸಿಕ್ಕಿಬಿದ್ದರು. ಅದಾಗಿಯೂ, ಯಶೋಧೆ ರೂಪದಲ್ಲಿದ್ದ ಅಲ್ಲಿನ ಶಿಕ್ಷಕಿಯರು ಮಕ್ಕಳನ್ನು ಮುದ್ದು ಮಾಡಿದರು.
ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಮಕ್ಕಳಲ್ಲಿ ಭಗವದ್ಗೀತೆ ಬಗ್ಗೆ ಬಾಲ್ಯದಲ್ಲಿಯೇ ಅರಿವು ಮೂಡಿಸಲು ಶಾಲೆಯಲ್ಲಿ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ವೇಷಭೂಷಣಗಳ ಜೊತೆ ಬಂದಿದ್ದ ಚಿಣ್ಣರು `ಜಯ ಜನಾರ್ಧನ ಕೃಷ್ಣ ರಾಧಿಕಾ ಪತೆ’ ಎಂಬ ಹಾಡಿಗೆ ಹೆಜ್ಜೆ ಹಾಕಿದರು. ಮೊಸರಿನ ಗಡಿಗೆಯನ್ನು ಒಡೆದ ಮಕ್ಕಳು ಅಲ್ಲಿದ್ದ ಬೆಣ್ಣೆ ತಿಂದು ಸಂಭ್ರಮಿಸಿದರು.
`ಎಜುಕೇರ ಆಂಗ್ಲ ಮಾಧ್ಯಮ ಶಾಲೆಯು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ ಇಲ್ಲಿನ ಶಿಕ್ಷಕರು ಶ್ರಮಿಸುತ್ತಾರೆ’ ಎಂದು ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕಿ ಪ್ರಭಾರಿ ಮುಖ್ಯೋಪಾಧ್ಯಾಯರು ಅಕ್ಷತಾ ಕೋಟಿ ಅವರು ತಿಳಿಸಿದರು. ಸ್ಪರ್ಧಾ ಕಾರ್ಯಕ್ರಮದ ನಿರ್ಣಾಯಕರಾಗಿ ಆಗಮಿಸಿದ್ದ ಜಗದಂಬ ಪಟಗಾರ್ ಮತ್ತು ಗೀತಾ ಯಜಮಾನ್ ಅವರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು.
ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಸಹನಾ ಹಿರೇಮಠ ಮತ್ತು ಮಾನಸ ಅವರು ಕಾರ್ಯಕ್ರಮ ಸಂಘಟಿಸಿದ್ದರು. ಸಂಚಾಲಕ ನಾಗರಾಜ್ ಮತ್ತು ಇನ್ನಿತರ ಶಿಕ್ಷಕರ ಜೊತೆ ಪಾಲಕರು ಭಾಗವಹಿಸಿದ್ದರು.
