ಕಾರವಾರದ ಮುದುಗಾ ಜನತಾ ವಿದ್ಯಾಲಯದ ಪ್ರೌಢಶಾಲಾ ಮಕ್ಕಳಿಗೆ ಈ ದಿನ ತಂತ್ರಜ್ಞಾನ ಪಾಠ ಮಾಡಲಾಗಿದ್ದು, ಅಂತರ್ಜಾಲ ಬಳಕೆ-ದುರ್ಬಳಕೆ ನಡುವಿನ ಅಂತರ ವಿವರಿಸಲಾಯಿತು. ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ವಿಷಯಗಳಲ್ಲಿ ಸಾಧನೆ ಮಾಡುವಂತೆ ಕರೆ ನೀಡಲಾಯಿತು.
`ವಿಶ್ವದ ಎಲ್ಲಡೆ ವಿಜ್ಞಾನ ಹಾಗೂ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದೇಶದ ಬೆಳವಣಿಗೆಗೆ ತಂತ್ರಜ್ಞಾನ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನವನ್ನು ಸರಿದಾರಿಯಲ್ಲಿ ಉಪಯೋಗಿಸಿಕೊಳ್ಳಬೇಕು’ ಎಂದು ಶಾಲೆಯ ಮುಖ್ಯೋಪಾಧ್ಯಾಪಕಿ ವೀಣಾ ಮಾಳಿಗೆರ ಕರೆ ನೀಡಿದರು. `ತಂತ್ರಜ್ಞಾನ ಸಾಧನೆಗಳ ಬಳಕೆ ಸಮರ್ಪಕವಾಗಿ ಇಲ್ಲದಿದ್ದರೆ ಮನುಕುಲಕ್ಕೆ ಅಪಾಯ ಖಚಿತ’ ಎಂದು ಅವರು ಎಚ್ಚರಿಸಿದರು.
`ಅಂತರ್ಜಾಲ ಸೌಲಭ್ಯ ಇದೀಗ ಕೈಗೆಟಕುವ ಹಾಗೇ ಸಿಗುತ್ತದೆ. ಹೀಗಾಗಿ ಅದನ್ನು ವಿದ್ಯಾರ್ಥಿಗಳು ಬಳಕೆ ಮಾಡಬೇಕು. ಆದರೆ, ಅದರ ದುರುಪಯೋಗವನ್ನು ಎಂದಿಗೂ ಪಡೆಯಬಾರದು. ಈಗಿನ ತಂತ್ರಜ್ಞಾನಗಳು ಶೈಕ್ಷಣಿಕ ಉದ್ದೇಶಗಳಿಗೆ ಸಹ ನೆರವಾಗಿದ್ದು, ಸದ್ವಿನಿಯೋಗದಿಂದ ಪ್ರಗತಿ ಸಾಧ್ಯ’ ಎಂದು ಕಿವಿಮಾತು ಹೇಳಿದರು. `ಅಂತರ್ಜಾಲ ಉಪಯೋಗದ ಬಗ್ಗೆ ಪಾಲಕರಲ್ಲಿಯೂ ಜಾಗೃತಿ ಅಗತ್ಯ’ ಎಂದವರು ವಿವರಿಸಿದರು.
ಶನಿವಾರ ಬ್ಯಾಗ್‌ರಹಿತ ದಿನವಾಗಿದ್ದು, ಈ ದಿನ ವಿಶೇಷ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಹ ಶಿಕ್ಷಕರಾದ ಜೈ ರಂಗನಾಥ ಬಿಎಸ್, ಸ್ಮಿತಾ ನಾಯ್ಕ, ನಿಕಿತಾ ನಾಯ್ಕ್. ವಿಠಲಗಾಡ, ನಾಗರಾಜ ಗೌಡ ಇತರರು ಇದ್ದರು.
Discussion about this post