ಕಾರವಾರದ ಬೈತಖೋಲದಲ್ಲಿ ಸರಾಯಿ ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 35ವರ್ಷದ ಚಾಸ್ಟಿನ್ ಬೆರೆಟ್ಟೊ ಶವವಾಗಿದ್ದಾರೆ.
ಒಂದು ವಾರದ ಹಿಂದೆ ಜೊರಮ್ ಬೆರೊಟ್ಟೊ ಹಾಗೂ ಅವರ ಅಕ್ಕನ ಮಗ ಚಾಸ್ಟಿನ್ ಬೆರೆಟ್ಟೊ ನಡುವೆ ಗಲಾಟೆ ನಡೆದಿತ್ತು. ಸ್ಥಳೀಯರು ಅವರನ್ನು ಸಮಾಧಾನ ಮಾಡಿದ್ದರು. ಆದರೆ, ಅವರಿಬ್ಬರ ನಡುವಿನ ದ್ವೇಷ ಕಡಿಮೆ ಆಗಿರಲಿಲ್ಲ.
ಶನಿವಾರ ರಾತ್ರಿ ಮತ್ತೆ ಅವರಿಬ್ಬರ ನಡುವೆ ಜಗಳವಾಗಿದ್ದು, ಮದ್ಯದ ನಶೆಯಲ್ಲಿ ಜೊರಮ್ ಬೆರೊಟ್ಟೊ ಅವರು ಚಾಸ್ಟಿನ್ ಬೆರೆಟ್ಟೊ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದ ಪರಿಣಾಮ ಚಾಸ್ಟಿನ್ ಬೆರೆಟ್ಟೊ ಸಾವನಪ್ಪಿದ್ದಾರೆ.
ಬೈತಕೋಲದಲ್ಲಿ ಚಾಸ್ಟಿನ್ ಬೆರೆಟ್ಟೊ ಹಾಗೂ ಅವರ ತಾಯಿ ಮಾತ್ರ ವಾಸವಾಗಿದ್ದು, ಶನಿವಾರ ತಾಯಿ ಮನೆಯಲ್ಲಿರಲಿಲ್ಲ. ಈ ವೇಳೆ ಚಾಸ್ಟಿನ್ ಬೆರೆಟ್ಟೊ ಹಾಗೂ ಜೊರಮ್ ಬೆರೊಟ್ಟೊ ಮದ್ಯದ ನಶೆಯಲ್ಲಿ ಹೊಡೆದಾಡಿಕೊಂಡಿರುವ ಅನುಮಾನಗಳಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆಪಡೆದು ವಿಚಾರಣೆ ಮುಂದುವರೆಸಿದ್ದಾರೆ.
