ಹಳಿಯಾಳದ ಮಲ್ಲಿಕಾರ್ಜುನ ಮರಾಠೆ ಅವರ ಮೇಲೆ ಮೂವರು ಆಕ್ರಮಣ ನಡೆಸಿದ್ದಾರೆ. ಜೊತೆಗೆ ಮತ್ತೊಮ್ಮೆ ದಾಳಿ ನಡೆಸುವ ಬೆದರಿಕೆಯನ್ನು ಒಡ್ಡಿದ್ದಾರೆ.
ಹಳಿಯಾಳದ ನೀಲವಾಣಿಯಲ್ಲಿ ಮಲ್ಲಿಕಾರ್ಜುನ ಮರಾಠೆ ಅವರು ವಾಸವಾಗಿದ್ದಾರೆ. 54ವರ್ಷದ ಅವರಿಗೆ ಯಾವುದೇ ಕೆಲಸವಿಲ್ಲ. ಹೀಗಾಗಿ ಅಗಸ್ಟ 16ರಂದು ಅವರು ಮನೆಯಲ್ಲಿಯೇ ಇದ್ದು, ಮಧ್ಯಾಹ್ನ 4 ಗಂಟೆಗೆ ಮೂವರು ಅಪರಿಚಿತರು ಅವರ ಮನೆಗೆ ನುಗ್ಗಿದರು. ಏಕಾಏಕಿ ಮಲ್ಲಿಕಾರ್ಜುನ ಮರಾಠೆ ಅವರನ್ನು ಬೈದರು.
ಈ ಬಗ್ಗೆ ಪ್ರಶ್ನಿಸಲು ಶುರು ಮಾಡಿದಾಗ ಅವರನ್ನು ಹಿಡಿದು ಹೊಡೆದರು. ಹೊಟ್ಟೆ, ತಲೆ, ಬೆನ್ನಿಗೆ ಥಳಿಸಿದರು. ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದರು. ಆಗ, ಮಲ್ಲಿಕಾರ್ಜುನ ಅವರ ಮಗಳು ಜೋರಾಗಿ ಕೂಗಿಕೊಂಡಿದ್ದು, ಆ ಮೂವರು ಅಲ್ಲಿಂದ ಹೊರ ಬಿದ್ದರು. ಮಲ್ಲಿಕಾರ್ಜುನ ಅವರನ್ನು ಮನೆಯಿಂದ ಹೊರಗೆ ಎಳೆದು ತಂದು ಕಲ್ಲು ಬೀಸಿದರು.
ಮಲ್ಲಿಕಾರ್ಜುನ ಅವರ ತಲೆ ಹಾಗೂ ಹೊಟ್ಟೆಗೆ ಕಲ್ಲು ತಾಗಿ ಗಾಯವಾಯಿತು. ಮತ್ತೊಮ್ಮೆ ಹೊಡೆಯುವುದಾಗಿ ಆ ಮೂವರು ಬೆದರಿಕೆ ಒಡ್ಡಿದ್ದು, ಅವರ ಹೆಸರು-ವಿಳಾಸವೂ ಗೊತ್ತಾಗಲಿಲ್ಲ. ಅಪರಿಚಿತರ ವಿರುದ್ಧ ಮಲ್ಲಿಕಾರ್ಜುನ ಅವರು ಪೊಲೀಸ್ ದೂರು ನೀಡಿದರು.
