ಅಂಕೋಲಾದ ಶಿರೂರು ಬಳಿ ಚಲಿಸುತ್ತಿದ್ದ ಬಸ್ಸಿಗೆ ಹಿಂದಿನಿoದ ಲಾರಿ ಗುದ್ದಿದೆ. ಪರಿಣಾಮ ಗೋಕರ್ಣ ಬಂಕಿಕೊಡ್ಲದ ಸ್ಟಾಪ್ ನರ್ಸ ಸುಶ್ಮಿತಾ ಆಗೇರ್ ಅವರಿಗೆ ಪೆಟ್ಟಾಗಿದೆ.
ಅಗಸ್ಟ 17ರ ರಾತ್ರಿ ಈ ಅಪಘಾತ ನಡೆದಿದೆ. ಬೆಳಗಾವಿ ಸಂಕೇಶ್ವರ ಡಿಪೋದ ಬಸ್ಸು ರಾತ್ರಿ 8.30ರ ವೇಳೆಗೆ ಅಂಕೋಲಾದಿAದ ಕುಮಟಾ ಕಡೆ ಚಲಿಸುತ್ತಿತ್ತು. ಶಿರೂರಿನ ಬಳಿ ಹಿಂದಿನಿAದ ಬಂದ ಲಾರಿ ಬಸ್ಸಿಗೆ ಡಿಕ್ಕಿಯಾಯಿತು.
ಆ ಬಸ್ಸಿನ ಹಿಂದಿನ ಸೀಟಿನಲ್ಲಿ ಸುಶ್ಮಿತಾ ಆಗೇರ್ (24) ಅವರು ಕುಳಿತಿದ್ದರು. ಡಿಕ್ಕಿಯ ರಭಸಕ್ಕೆ ಅವರು ಮುಂದೆ ಬಡಿದಿದ್ದು, ತಲೆಗೆ ಪೆಟ್ಟು ಮಾಡಿಕೊಂಡರು. ಲಾರಿ ಓಡಿಸುತ್ತಿದ್ದ ಸಯ್ಯದ ಮಕಸೂದ್ ವಿರುದ್ಧ ಬಸ್ಸಿನ ನಿರ್ವಾಹಕ ಮುಕ್ತುಮಸಾಬ್ ದೊಡ್ಡಮನಿ ಪೊಲೀಸ್ ದೂರು ನೀಡಿದರು. ಅಂಕೊಲಾ ಪೊಲೀಸರು ಪ್ರಕರಣ ದಾಖಲಿಸಿದರು.
