ಕಾರವಾರ ಲೋಕೋಪಯೋಗಿ ಇಲಾಖೆಯ ನೂತನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಎಚ್ ಮಲ್ಲಿಕಾರ್ಜುನ ಅವರು ಅಧಿಕಾರವಹಿಸಿಕೊಂಡಿದ್ದಾರೆ. ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದವರು ನೂತನ ಅಧಿಕಾರಿಗೆ ಮೈಸೂರು ಪೇಟ ತೊಡಿಸಿ ಬರಮಾಡಿಕೊಂಡಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ್ ಬಿಲಿಯೇ ಅವರ ಜೊತೆ ಗುತ್ತಿಗೆದಾರರು ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಎಚ್ ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿದರು. ನೂತನವಾಗಿ ಅಧಿಕಾರವಹಿಸಿಕೊಂಡ ಅಧಿಕಾರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಅದಾದ ನಂತರ ಗೌತಮಬುದ್ಧನ ಮೂರ್ತಿಯನ್ನು ಉಡುಗರೆಯಾಗಿ ನೀಡಿದರು.
`ಕರಾವಳಿಗೆ ಸಾಕಷ್ಟು ಗುತ್ತಿಗೆ ಕಾಮಗಾರಿಗಳು ಬರುತ್ತವೆ. ಆ ವೇಳೆ ಎಲ್ಲಾ ಗುತ್ತಿಗೆದಾರರನ್ನು ವಿಶ್ವಾಸಕ್ಕೆ ಪಡೆದು ಚರ್ಚಿಸಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರೈಲು ಮತ್ತು ರೈಲ್ವೆ ಹಳಿಯ ಹಾಗಿರುವುದರಿಂದ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಸಮಾಜಕ್ಕೂ ಒಳಿತು. ತುರ್ತು ಕಾಮಗಾರಿ ಹಾಗೂ ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳ ಬಗ್ಗೆ ಸಂಘದೊoದಿಗೆ ಚರ್ಚಿಸಿ ಗುತ್ತಿಗೆ ನೀಡುವ ಗೊಂದಲ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಗುತ್ತಿಗೆದಾರರು ಮನವಿ ಮಾಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಮಾಧವ ನಾಯಕ ಅವರು ಎಂಜಿನಿಯರ್ ಅವರನ್ನು ಸ್ವಾಗತಿಸಿ ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮು ಅರ್ಗೇಕರ್, ಲೆಕ್ಕಾಧಿಕಾರಿ ರಾಜೇಶ್ ರಾಮನಾಥನ್ ಈ ವೇಳೆ ಇದ್ದರು. ಸಂಘದ ಉಪಾಧ್ಯಕ್ಷ ಛತ್ರಪತಿ ಮ್ಹಾಲ್ಸೇಕರ್, ಖಜಾಂಚಿ ಸತೀಶ ನಾಯ್ಕ, ಜಯಪ್ರಕಾಶ್ ಜಿ ಕೆ, ಶಶಿಕಾಂತ ನಾಯ್ಕ, ಭೋಜರಾಜ್ ದೊರೆಸ್ವಾಮಿ, ಉದಯ ವಿ ನಾಯ್ಕ, ಸಿದ್ಧಾರ್ಥ ನಾಯ್ಕ, ರಾಮನಾಥ ನಾಯ್ಕ, ಮಂಗೇಶ್ಕರ್ ಇತರರು ಜೊತೆಗಿದ್ದರು.
Discussion about this post