ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ 10 ತಾಲೂಕಿನ ಶಾಲೆಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ರಜೆ ಘೋಷಿಸಿದ್ದು, ಈ ರಜೆ ಇದೀಗ ಹಳಿಯಾಳಕ್ಕೂ ವಿಸ್ತರಣೆ ಆಗಿದೆ. ಅದರ ಪ್ರಕಾರ 2025ರ ಅಗಸ್ಟ 18ರಂದು ಮುಂಡಗೋಡುಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಅನ್ವಯ ಆಗಲಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಹಿನ್ನಲೆ ಹಳಿಯಾಳ ತಾಲೂಕಿನ ಶಾಲೆಗಳಿಗೆ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. ಈ ರಜೆ ಶಾಲೆ, ಅಂಗನವಾಡಿಗಳಿಗೆ ಮಾತ್ರ ಸೀಮಿತವಾಗಿದೆ. ಹಳಿಯಾಳದ ಕಾಲೇಜುಗಳಿಗೆ ರಜೆ ಅನ್ವಯ ಆಗುತ್ತಿಲ್ಲ.
ಅಗಸ್ಟ 18ರ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿ ರಜೆ ನೀಡಲಾಗಿದೆ. ರಜಾ ದಿನದ ಪಠ್ಯವನ್ನು ಇನ್ನಿತರ ದಿನದಲ್ಲಿ ಹೊಂದಾಣಿಕೆ ಮಾಡುವಂತೆ ಸೂಚಿಸಲಾಗಿದೆ.
Discussion about this post