ಶಿರಸಿಯ ತರಕಾರಿ ವ್ಯಾಪಾರಿ ಶ್ರೀಕಾಂತ ಅಗಸನಹಳ್ಳಿ ಮಾದಕ ವ್ಯಸನ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಕಾನೂನುಬಾಹಿರ ಕೃತ್ಯ ಎಸಗಿದ ಕಾರಣ ಪೊಲೀಸರು ಅವರ ವಿರುದ್ಧ ಕ್ರಮ ಜರುಗಿಸಿದ್ದಾರೆ.
ಶ್ರೀಕಾಂತ ಅಗಸನಹಳ್ಳಿ ಅವರು ಗಣೇಶ ನಗರ ಮಂಜುನಾಥ ಕಾಲೋನಿಯ ನಿವಾಸಿ. ಅಲ್ಲಿನ 5ನೇ ಕ್ರಾಸಿನಲ್ಲಿ ವಾಸವಾಗಿರುವ ಅವರು ತರಕಾರಿ ಮಾರಾಟ ಮಾಡಿಕೊಂಡಿದ್ದರು. ಅಗಸ್ಟ 16ರಂದು ಶಿರಸಿಯ ಆನೆಹೊಂಡದ ಬಳಿ ಅವರು ಅಲೆದಾಡುತ್ತಿದ್ದರು. ಆ ವೇಳೆ ಪಿಎಸ್‌ಐ ನಾಗಪ್ಪ ಬಿ ಅವರು ಶ್ರೀಕಾಂತ ಅಗಸನಹಳ್ಳಿ ಅವರನ್ನು ವಿಚಾರಣೆಗೆ ಒಳಪಡಿಸಿದರು. ಮಾದಕ ವ್ಯಸನದಲ್ಲಿರುವ ಅನುಮಾನದ ಹಿನ್ನಲೆ ವೈದ್ಯಕೀಯ ಪರೀಕ್ಷೆಗೆ ರವಾನಿಸಿದರು.
ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ದೃಢವಾಯಿತು. ವೈದ್ಯರು ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದರು. ಹೀಗಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
Discussion about this post