ಕುಮಟಾದ ಫೈನಾನ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಂಕೋಲಾದ ನಾಗರಾಜ ನಾಯ್ಕ ಅವರು ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮೊರಬಾ ಬಳಿ ಈ ಅವಘಡ ನಡೆದಿದೆ.
ಅಂಕೋಲಾ ಮಾಧವ ನಗರದ ಕಂತ್ರಿ ಬಳಿ ನಾಗರಾಜ ನಾಯ್ಕ (27) ಅವರು ವಾಸವಾಗಿದ್ದರು. ಕುಮಟಾದ ಚೋಳಮಂಡಳ ಫೈನಾನ್ಸಿನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅಗಸ್ಟ 16ರಂದು ರಸ್ತೆ ಅಪಘಾತದಲ್ಲಿ ಅವರು ಸಾವನಪ್ಪಿದರು.
ನಾಗರಾಜ ನಾಯ್ಕ ಅವರು ರಾತ್ರಿ 9.30ಕ್ಕೆ ಕುಮಟಾ ಕಡೆಯಿಂದ ಅಂಕೋಲಾ ಕಡೆ ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದರು. ಬೇಗ ಮನೆಗೆ ತಲುಪಬೇಕು ಎಂಬ ಕಾರಣಕ್ಕಾಗಿ ಅವರು ಸ್ಕೂಟಿಯ ವೇಗ ಹೆಚ್ಚಿಸಿದ್ದರು. ಮೊರಬಾ ಬಸ್ ನಿಲ್ದಾಣದ ಬಳಿ ಸ್ಕೂಡಿ ಡಿವೈಡರಿಗೆ ಡಿಕ್ಕಿಯಾಯಿತು.
ಪರಿಣಾಮ ನಾಗರಾಜ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಅವರನ್ನು ಕುಮಟಾ ಆಸ್ಪತ್ರೆಗೆ ಸೇರಿಸುವುದರ ಒಳಗೆ ಕೊನೆಯುಸಿರೆಳೆದರು. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗರಾಜ ನಾಯ್ಕ ಅವರ ಸಹೋದರ ರಾಮಕೃಷ್ಣ ನಾಯ್ಕ ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Discussion about this post