ಶಿರಸಿಯ ಬಾಲಕಿಯರಿಬ್ಬರು ಮನೆಬಿಟ್ಟು ಹೋಗಿದ್ದು, ಅವರ ಹುಡುಕಾಟ ನಡೆಯುತ್ತಿದೆ. ಸಾರ್ವಜನಿಕರ ಜೊತೆ ಪೊಲೀಸರು ಬಾಲಕಿಯರ ಹುಡುಕಾಟ ನಡೆಸುತ್ತಿದ್ದಾರೆ.
ಅಗಸ್ಟ 16ರ ಮಧ್ಯಾಹ್ನ ಚಿತ್ರಕಲಾ ತರಗತಿಗೆ ಹೋಗುವುದಾಗಿ ಹೇಳಿ ಬಾಲಕಿಯರಿಬ್ಬರು ಮನೆಯಿಂದ ಹೊರಟಿದ್ದಾರೆ. ಆದರೆ, ತರಗತಿಗೆ ಅವರು ಹೋಗಿಲ್ಲ. ಬಸ್ ನಿಲ್ದಾಣದ ಕೌಂಟರಿನಲ್ಲಿ ಅವರು ವಿಚಾರಣೆ ನಡೆಸಿದ್ದಾರೆ. ಅದಾದ ನಂತರ ಬಸ್ಸು ಹತ್ತಿದ್ದಾರೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಗಸ್ಟ 17ರ ಸಂಜೆಯವರೆಗೂ ಅವರಿಬ್ಬರ ಸುಳಿವು ಸಿಕ್ಕಿಲ್ಲ. ಆ ಬಾಲಕಿಯರ ಪೈಕಿ ಒಬ್ಬರು 6ನೇ ತರಗತಿ ಓದುತ್ತಿದ್ದಾರೆ. ಮತ್ತೊಬ್ಬರು 8ನೇ ತರಗತಿ ಓದುತ್ತಿದ್ದಾರೆ. ಸಂಬoಧಿಕರ ಮನೆಯಲ್ಲಿ ಶೋಧ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ. `ಆ ಇಬ್ಬರು ಬಾಲಕಿಯರು ಸುರಕ್ಷಿತವಾಗಿ ಮನೆಗೆ ಬರಲಿ’ ಎಂದು ಜನ ಜನ ಪ್ರಾರ್ಥಿಸಿದ್ದಾರೆ.
ಮಕ್ಕಳ ಸುರಕ್ಷತೆ ಹಾಗೂ ಕಾನೂನಾತ್ಮಕ ಕಾರಣದಿಂದ ನಾವು ಅವರ ಫೋಟೋ-ಹೆಸರು ಪ್ರಕಟಿಸುತ್ತಿಲ್ಲ. ಅದಾಗಿಯೂ, ಅನುಮಾನಾಸ್ಪದ ವ್ಯಕ್ತಿ ಅಥವಾ ಮಕ್ಕಳ ಸುಳಿವು ನಿಮಗೆ ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ.
Discussion about this post