`ಧರ್ಮಸ್ಥಳದ ವಿರುದ್ಧ ನಡೆಯುವ ಅಪಪ್ರಚಾರ ಖಂಡನೀಯವಾಗಿದ್ದು, ಮುಸುಕುಧಾರಿ ವ್ಯಕ್ತಿ ವಿರುದ್ಧ ತನಿಖೆ ನಡೆಯಬೇಕು’ ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
`ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳ ತನಿಖೆಗೆ ಆಕ್ಷೇಪಣೆ ಇಲ್ಲ. ತನಿಖೆಯಿಂದ ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅದರ ಪ್ರಕಾರ ತನಿಖೆ ಹೆಸರಿನಲ್ಲಿ ಧರ್ಮಸ್ಥಳದ ವಿರುದ್ಧ ಆಗುವ ಅಪಪ್ರಚಾರವೂ ಖಂಡನೀಯ’ ಎಂದವರು ಹೇಳಿದ್ದಾರೆ. `ತನಿಖಾ ತಂಡ ರಚಿಸಿದ್ದ ರಾಜ್ಯ ಸರ್ಕಾರ ಇದಕ್ಕೆ ಸೂಕ್ತ ನಿರ್ದೇಶನ ನೀಡಿಲ್ಲ. ಅನಾಮಿಕ ಮುಸುಕುಧಾರಿಯ ಪೂರ್ವಾಪರ ಯೋಜನೆ-ವಿಚಾರಣೆ ನಡೆಸದೇ ತನಿಖೆ ನಡೆಸಿದ್ದು ಸರಿಯಲ್ಲ’ ಎಂದವರು ಹೇಳಿದ್ದಾರೆ.
`ಅನಾಮಿಕ ತೋರಿಸಿದ ಎಲ್ಲ ಸ್ಥಳಗಳನ್ನು ಶೋಧಿಸಿದ ನಂತರವೂ ಯಾವ ಕುರುಹು ಸಿಕ್ಕಿಲ್ಲ. ಇಲ್ಲಿಯವರೆಗೂ ತಾಳ್ಮೆಯಿಂದ ಇದ್ದ ಭಕ್ತರ ಸಹನೆ ಒಡೆದಿದ್ದು, ಅವರು ಇದೀಗ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ನಂತರ ಸರ್ಕಾರಕ್ಕೆ ಮುಸುಕುಧಾರಿ ಮೇಲೆ ಅನುಮಾನ ಬಂದಿದೆ. ಈ ಅನುಮಾನ ಮೊದಲೇ ಬಂದಿದ್ದರೆ ಕ್ಷೇತ್ರದ ಮಾನ ಹರಾಜು ಆಗುತ್ತಿರಲಿಲ್ಲ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
`ರಾಜಕೀಯ ಅಸ್ತಿತ್ವಕ್ಕಾಗಿ ಧರ್ಮವನ್ನು ಟಾರ್ಗೇಟ್ ಮಾಡಿದವರನ್ನು ಧರ್ಮಸ್ಥಳ ಧರ್ಮಾಧಿಕಾರಿ ಕ್ಷಮಿಸಬಹುದು. ಆದರೆ, ಆ ದೈವ ಮಂಜುನಾಥಸ್ವಾಮಿ ಸುಮ್ಮನೆ ಬಿಡಲಾರ’ ಎಂದು ರಾಮು ನಾಯ್ಕ ಹೇಳಿದ್ದಾರೆ.
Discussion about this post