ಶಾಲಾ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಮಂಗಳೂರಿನ ಗಾಂಧಿ ನಗರ ಸರಕಾರಿ ಶಾಲೆ ಹಾಗೂ ಕದ್ರಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಾಬರ್ ಚವನ್ ಪ್ರಾಶ್ ವಿತರಣೆ ಮಾಡಲಾಗಿದೆ. ಮಳೆಗಾಲದಲ್ಲಿ ಬರುವ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಇದು ಸಹಕಾರಿ ಎಂದು ಕಂಪನಿಯವರು ಹೇಳಿದ್ದಾರೆ.
`ಪ್ರಾಚೀನ ಆಯುರ್ವೇದ ಪದ್ಧತಿಗಳ ಆಧಾರದ ಮೇಲೆ ಸರಿಯಾದ ಪ್ರಮಾಣದ ಔಷಧಿಗಳನ್ನು ಸೇವಿಸಿದರೆ ದೇಹವನ್ನು ಮಳೆಗಾಳದ ರೋಗಕಾರಕ ಜೀವಾಣುಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಅಲೋಪತಿ ಔಷಧಿಗಳು ರೋಗಗಳನ್ನು ಗುಣಪಡಿಸುವತ್ತ ಗಮನಹರಿಸಿದರೆ, ಪ್ರಾಚೀನ ಭಾರತೀಯ ಗಿಡಮೂಲಿಕೆ ವ್ಯವಸ್ಥೆ ಮತ್ತು ಆಯುರ್ವೇದವು ಆರೋಗ್ಯಕರ ಮತ್ತು ಚೈತನ್ಯಮಯ ಜೀವನಶೈಲಿಯನ್ನು ಪಾಲಿಸುವ ಕಡೆಗೆ ಗಮನಹರಿಸುತ್ತವೆ’ ಎಂದು ಕಂಪನಿ ಹೇಳಿದೆ.
`ಆಯುರ್ವೇದದ ಎಂಟು ಶಾಖೆಗಳಲ್ಲಿ ಒಂದಾದ ರಸಾಯನ ಚಿಕಿತ್ಸೆಯು, ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಬೇಕಾದ ಉತ್ತಮ ಸೂತ್ರಗಳು, ಆಹಾರ ನಿಯಮಗಳು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಪಾಲಿಸಲು ನೆರವಾಗುತ್ತವೆ. ಅದರಲ್ಲೂ ದಿನನಿತ್ಯ ಎರಡು ಚಮಚ ಡಾಬರ್ ಚ್ಯವನ್‌ಪ್ರಾಶ್ ಸೇವನೆಯು ರಸಾಯನ ಚಿಕಿತ್ಸೆಯನ್ನು ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಲು ಅತ್ಯಂತ ಉತ್ತಮ ಮಾರ್ಗವಾಗಿದೆ’ ಎಂದು ಡಾ ರುಚಿ ಅವರು ಮಾಹಿತಿ ನೀಡಿದರು.
`ಚವನ್‌ಪ್ರಾಶ್ ಆಯುರ್ವೇದ ಉತ್ಪನ್ನವಾಗಿದ್ದು, ದಶಕಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳಿAದ ರಕ್ಷಣೆ ಹೊಂದಲು ಬಳಸಲಾಗುತ್ತಿದೆ’ ಎಂದರು. ಸಂಸ್ಥೆಯ ಪ್ರಶಾಂತ್ ಅಗರವಾಲ್ ಅವರು ಮಾತನಾಡಿ `ಆಯುರ್ವೇದದ ಶ್ರೀಮಂತ ಪರಂಪರೆ ಮತ್ತು ಪ್ರಕೃತಿ ಗಾಢ ಜ್ಞಾನ ಹೊಂದಿರುವ ಡಾಬರ್ ಯಾವಾಗಲೂ ಸುರಕ್ಷಿತ, ಕೈಗೆಟಕುವ ದರದಲ್ಲಿ ಲಭ್ಯವಿದೆ’ ಎಂದರು. ಶಾಲೆಯ ಮುಖ್ಯ ಶಿಕ್ಷಕ ಸಮಂತ್, ಗಾಂಧಿ ನಗರ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕಿಯರು ಹಾಗೂ ಡಾಬರ್ ಇಂಡಿಯಾದ ದಿನೇಶ್ ಕುಮಾರ್ ಇದ್ದರು.
Discussion about this post