ಬೇಸಿಗೆ ಪೂರ್ತಿ ಅಕ್ರಮ ಮರಳು ಸಾಗಾಟ ಮಾಡಿದ ದಂಧೆಕೋರರು ಮಳೆಗಾಲದ ಅವಧಿಯಲ್ಲಿಯೂ ಪರಿಸರದ ಬಗ್ಗೆ ಚಿಂತಿಸಿಲ್ಲ. ಅಕ್ರಮ ಮರಳುಗಾರಿಕೆ ಈಗಲೂ ಮುಂದುವರೆದಿದ್ದು, ನಸುಕಿನ ವೇಳೆ ಕಾರ್ಯಾಚರಣೆ ನಡೆಸಿದ ಹೊನ್ನಾವರ ಪಿಎಸ್ಐ ಕುಮಾರ ಕಾಂಬ್ಳೆ ಅವರು ಕಳ್ಳ ಸಾಗಾಟಕ್ಕೆ ತಡೆ ಒಡ್ಡಿದರು.
ಸರ್ಕಾರಕ್ಕೂ ಮೋಸ ಮಾಡಿ, ಜೀವ ವೈವಿಧ್ಯಕ್ಕೂ ಹಾನಿ ಮಾಡಿ ಮರಳುಗಾರಿಕೆ ನಡೆಸುತ್ತಿದ್ದ ಹೊನ್ನಾವರ ಮೇಲಿನಇಡಗುಂಜಿಯ ವೆಂಕಟೇಶ ನಾಯ್ಕ ಹಾಗೂ ಬಳಕೂರು ಬಳಿಯ ತಲಗೋಡು ಹಾಮಕ್ಕಿಯ ಮಾರುತಿ ನಾಯ್ಕ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರು. ಕೇರಳ ನೋಂದಣಿಯ ವಾಹನದ ಮಾಲಕರಾಗಿರುವ ವೆಂಕಟೇಶ ನಾಯ್ಕ ಅವರು ತಮ್ಮ ಲಾರಿಗೆ ಮಾರುತಿ ನಾಯ್ಕ ಅವರನ್ನು ಚಾಲಕರನ್ನಾಗಿ ನೇಮಿಸಿಕೊಂಡಿದ್ದು, ಇಬ್ಬರು ಸೇರಿ ಮರಳು ಸಾಗಾಟದಲ್ಲಿ ತೊಡಗಿದ್ದರು.
ಮಂಗಳವಾರ ನಸುಕಿನಲ್ಲಿ ಕಾರ್ಯಾಚರಣೆಗಿಳಿದ ಹೊನ್ನಾವರ ಪಿಎಸ್ಐ ಕುಮಾರ ಕಾಂಬ್ಳೆ ಅವರು ಹೆದ್ದಾರಿ ಮಾರ್ಗದ ಜಡ್ಡಿ ಕ್ರಾಸ್ ಹತ್ತಿರ ಲಾರಿಗೆ ಅಡ್ಡಲಾಗಿ ಕೈ ಮಾಡಿದರು. ಲಾರಿ ತಪಾಸಣೆ ಮಾಡಿದಾಗ ಅದರಲ್ಲಿ ಮೂರು ಬರಾಸ್ ಮರಳು ಕಾಣಿಸಿತು. ಹೊನ್ನಾವರದ ಕೋಡಾಣಿ ಗ್ರಾಮದ ಬಳಿ ಮರಳನ್ನು ದಾಸ್ತಾನು ಮಾಡಿ, ಅಲ್ಲಿಂದ ಸಾಗಾಟ ಮಾಡುತ್ತಿರುವುದು ಈ ವೇಳೆ ಗಮನಕ್ಕೆ ಬಂದಿತು.
ಅAದಾಜು 9 ಸಾವಿರ ರೂ ಮೌಲ್ಯದ ರೇತಿಯನ್ನು ಪೊಲೀಸರು ವಶಕ್ಕೆಪಡೆದರು. ಕಾನೂನುಬಾಹಿರ ಕೆಲಸದಲ್ಲಿ ತೊಡಗಿ ಕಾಸು ಮಾಡಿಕೊಳ್ಳುತ್ತಿದ್ದ ವೆಂಕಟೇಶ ನಾಯ್ಕ ಹಾಗೂ ಮಾರುತಿ ನಾಯ್ಕ ವಿರುದ್ಧ ಪ್ರಕರಣವನ್ನು ದಾಖಲಿಸಿದರು.
Discussion about this post