ಮೇಷ ರಾಶಿ: ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ. ನಿಮ್ಮ ಸ್ವಭಾವ ಬೇರೆಯವರ ಮೆಚ್ಚುಗೆಗೆ ಪಾತ್ರವಾಗಲಿದೆ.
ವೃಷಭ ರಾಶಿ: ಹಣದ ಆಗಮನ ಆಗಲಿದೆ. ಕುಟುಂಬದಲ್ಲಿ ಶಾಂತಿ ಕಾಣಲಿದೆ. ಕೆಲಸದಲ್ಲಿ ಉತ್ಸಾಹ ಹೆಚ್ಚಲಿದೆ. ಮಾನಸಿಕ ಒತ್ತಡ ದೂರವಾಗಲಿದೆ.
ಮಿಥುನ ರಾಶಿ: ವೃತ್ತಿ ವಿಷಯವಾಗಿ ಪ್ರಗತಿ ಸಾಧ್ಯವಿದೆ. ಹಳೆಯ ಸ್ನೇಹಿತರು ಮಾತಿಗೆ ಸಿಗುತ್ತಾರೆ. ಮನಸ್ಸು ಆಹ್ಲಾದಕರವಾಗಿರುತ್ತದೆ.
ಕರ್ಕ ರಾಶಿ: ನಿಮ್ಮ ಆರೋಗ್ಯದಲ್ಲಿ ಏರಿಳಿತ ಆಗುವ ಸಾಧ್ಯತೆಯಿದ್ದು, ಮುನ್ನಚ್ಚರಿಕೆ ಅಗತ್ಯ. ಮನೆಯಲ್ಲಿ ಮಕ್ಕಳ ಕಲರವ ಖುಷಿ ಕೊಡಲಿದೆ. ಹೊಸ ಅವಕಾಶಗಳನ್ನು ಒಪ್ಪಿಕೊಳ್ಳಿ. ಧೈರ್ಯದಿಂದ ಕೆಲಸ ಮಾಡಿ.
ಸಿಂಹ ರಾಶಿ: ನಿಮ್ಮ ಕಾರ್ಯಕ್ಷಮತೆಯನ್ನು ಮರೆಯದಿರಿ. ಮನೆಯಲ್ಲಿ ಹಬ್ಬದ ವಾತಾವರಣ ಕಾನಬಹುದು. ವೃತ್ತಿ ಬೆಳವಣಿಗೆ ಸಾಧ್ಯವಿದೆ. ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷ ಕೊಡಲಿದೆ.
ಕನ್ಯಾ ರಾಶಿ: ನಿಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕೆಲಸದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಹಿರಿಯರ ಸಲಹೆಪಡೆದು ಕಾರ್ಯ ಶುರು ಮಾಡಿ. ಹೊಸ ಯೋಜನೆಗಳು ಫಲ ಕೊಡಲಿದೆ.
ತುಲಾ ರಾಶಿ: ಕೆಲಸದ ವಿಷಯದಲ್ಲಿ ಗೌರವ ಸಿಗಲಿದೆ. ನಿಮ್ಮ ದುಡಿಮೆ ಯಶಸ್ಸಿನ ಗುಟ್ಟು ಎಂದು ಮರೆಯಬೇಡಿ. ಬೇಗ ಕೆಲಸ ಶುರು ಮಾಡಿ, ಬೇಗ ಮುಗಿಸುವುದನ್ನು ರೂಢಿಸಿಕೊಳ್ಳಿ.
ವೃಶ್ಚಿಕ ರಾಶಿ: ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಕುಟುಂಬದಲ್ಲಿನ ಕಲಹಗಳು ದೂರವಾಗಲಿದೆ. ಮನಸ್ಸಿನಲ್ಲಿ ಗಟ್ಟಿಯಾದ ನಿರ್ಣಯ ಮಾಡಿ ಅದನ್ನು ಕಾರ್ಯರೂಪಕ್ಕೆ ತನ್ನಿ. ಗೊಂದಲ ಬೇಡ.
ಧನು ರಾಶಿ: ಹೊಸ ಯೋಜನೆಗಳನ್ನು ಶುರು ಮಾಡಲು ಸಕಾಲ. ಸ್ನೇಹಿತರ ಜೊತೆ ಸಮಯ ಕಳೆಯಿರಿ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ದೂರ ಪ್ರಯಾಣ ಮಾಡುವುದು ಒಳ್ಳೆಯದಲ್ಲ.
ಮಕರ ರಾಶಿ: ನಿಮ್ಮ ಮನಸ್ಸು ವಿಭಿನ್ನ ವಿಷಯಗಳಿಂದ ಕೂಡಿರಲಿದೆ. ಚಂಚಲ ಸ್ವಭಾವದಿಂದ ಹೊರ ಬನ್ನಿ. ಕುಟುಂಬದವರ ಜೊತೆ ಕಾಲ ಕಳೆಯಿರಿ. ವೃತ್ತಿ ಸರಿಯಾಗಿದ್ದರೆ ಹಣಕಾಸಿನ ಲಾಭ ನಿಶ್ಚಿತ.
ಕುಂಭ ರಾಶಿ: ಆರೋಗ್ಯ ಸುಧಾರಣೆ ಆಗಲಿದೆ. ಹಣಕಾಸಿನ ಬೆಳವಣಿಗೆ ಸಾಧ್ಯವಿದೆ. ಸ್ನೇಹಿತರ ಸಹಕಾರವನ್ನು ಮರೆಯಬೇಡಿ. ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಚಂದವಾಗಿ ರೂಪಿಸಿಕೊಳ್ಳಿ.
ಮೀನ ರಾಶಿ: ಈ ದಿನ ಹಣ ಖರ್ಚಾಗಲಿದೆ. ವೃತ್ತಿ ಅವಕಾಶಗಳನ್ನು ಸರಿಯಾಗಿ ಬಳಸದಿದ್ದರೆ ನಷ್ಟವಾಗಲಿದೆ. ವೈಚಾರಿಕ ವಿಷಯಗಳ ಬಗ್ಗೆ ಚಿಂತಿಸಿ.
Discussion about this post