ಕಾರವಾರದಲ್ಲಿ ವಾಸವಾಗಿರುವ ನಿವೃತ್ತ ASI ಶ್ರೀಕಾಂತ ನಾಯ್ಕ ಅವರನ್ನು ನಗರದ ಸ್ಟಾರ್ಚಾಯ್ಸ ಸಂಗೀತ ತರಗತಿಯವರು ಸನ್ಮಾನಿಸಿದ್ದಾರೆ.
ಕಾರವಾರದ ಕೋಡಿಭಾಗದಲ್ಲಿ ಶ್ರೀಕಾಂತ ನಾಯ್ಕ ಅವರು `ಗೌರಿ-ಮಹಾದೇವ ಕೃಪಾ ಜನಸಾಂತ್ವನ ಕೇಂದ್ರ’ವನ್ನು ನಡೆಸುತ್ತಿದ್ದಾರೆ. ನೊಂದವರಿಗೆ ನೆರವು ನೀಡುವ ಅವರಿಗೆ ಈಗಾಗಲೇ ಹಲವು ಸನ್ಮಾನಗಳು ಸಿಕ್ಕಿವೆ. ಶ್ರೀಕಾಂತ ನಾಯ್ಕ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸ್ಟಾರ್ಚಾಯ್ಸ ಸಂಗೀತ ತರಗತಿಯವರು ಅಗಸ್ಟ 15ರಂದು ನಡೆದ ಸ್ವಾತಂತ್ರ ದಿನಾಚರಣೆ ಸಡಗರದಲ್ಲಿ ಶ್ರೀಕಾಂತ ನಾಯ್ಕ ಅವರು ಭಾಗವಹಿಸಿದ್ದು, ಶ್ರೀಕಾಂತ ನಾಯ್ಕ ಅವರ ನಿಸ್ವಾರ್ಥ ಸೇವೆ ಪರಿಗಣಿಸಿ ಸಂಘಟಕರು ಸನ್ಮಾನಿಸಿದರು.
ಸ್ಟಾರ್ಚಾಯ್ಸ್ ಮ್ಯೂಸಿಕ್ ಕ್ಲಾಸ್’ನ ಮುಖ್ಯಸ್ಥ ಕಿರಣ್ ನಾಯ್ಕ, ಪ್ರಮುಖರಾದ ಅನಿಲ್ ಕೊಚ್ರೇಕರ, ಜಗದೀಶ್ ಗಾವ್ಕರ್, ಶಾಮ್ ಸುಂದರ್ ಶಾರದಾ ನಾಯ್ಕ ಇತರರು ಈ ವೇಳೆ ಇದ್ದರು.
