ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಜೋರು ಮಳೆ ಮುಂದುವರೆದಿದೆ. ಅಗಸ್ಟ 20ರವರೆಗೂ ರೆಡ್ ಅಲರ್ಟ ಘೋಷಿಸಲಾಗಿದೆ.
ಶಾಲಾ – ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಿಸಿದರೆ ಮಕ್ಕಳ ಶೈಕ್ಷಣಿಕ ಜೀವನಕ್ಕೆ ತೊಂದರೆ ಆಗಲಿದೆ ಎಂಬ ವಾದವಿದೆ. ಇದೀಗ ಪದೇ ಪದೇ ರಜೆ ನೀಡುವುದರಿಂದ ಬೇಸಿಗೆ ಅವಧಿಯಲ್ಲಿ ಮಕ್ಕಳಿಗೆ ಹೆಚ್ಚುವರಿ ಅವಧಿ ಪಾಠ ಮಾಡಬೇಕಿದ್ದು, ಆ ವೇಳೆ ಅವರ ಮೇಲೆ ಒತ್ತಡ ಸೃಷ್ಠಿಯಾಗುವ ಆತಂಕವೂ ಇದೆ. ಅದರೊಂದಿಗೆ ರಜೆ ನೀಡದೇ ಇದ್ದರೆ ಮಕ್ಕಳ ಸುರಕ್ಷತೆಗೆ ಸಮಸ್ಯೆ ಆಗಲಿದೆ ಎಂಬ ಮಾತು ಇದೆ. ಹೀಗಾಗಿ ಎಲ್ಲಾ ಬಗೆಯ ಸಮತೋಲನ ನಿಲುವು ಕಾಯ್ದುಕೊಂಡು ರಜೆ ಘೋಷಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿದ್ದು, ರಜೆ ಘೋಷಣೆಯ ಕುರಿತು ಅವಲೋಕನಕ್ಕೆ ಸಮಯ ಬೇಕಾಗುತ್ತದೆ.
ರಜೆ ಘೋಷಣೆ ಮಾಡುವ ಮುನ್ನ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆ ಉಪನಿರ್ದೇಶಕರು ನೀಡುವ ವರದಿ ಮೊದಲು ಪರಿಶೀಲಿಸುತ್ತಾರೆ. ಅದಾದ ನಂತರ ಭಾರತೀಯ ಹವಾಮಾನ ಲಾಖೆಯ ಸೂಚನೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನೀಡುವ ನಿರ್ದೇಶನವನ್ನು ಗಮನಿಸುತ್ತಾರೆ. ವಿವಿಧ ತಾಲೂಕಿನ ತಹಶೀಲ್ದಾರ್ ವರದಿಯನ್ನು ಗಣನೆಗೆ ತೆಗೆದುಕೊಂಡು ಮಳೆ ಹೆಚ್ಚಿರುವ ತಾಲೂಕಿನ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸುತ್ತಾರೆ. ಅದಾಗಿಯೂ, ಪರಿಸ್ಥಿತಿಗೆ ಅನುಗುಣವಾಗಿ ಆಯಾ ತಾಲೂಕಿನ ತಹಶೀಲ್ದಾರರು, ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶಾಲೆಗೆ ರಜೆ ನೀಡುವ ಅಧಿಕಾರ ನೀಡುತ್ತಾರೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಅಗಸ್ಟ 20ರಂದು ಮಳೆ ಕಡಿಮೆ ಆಗಲಿದೆ. ಹೀಗಾಗಿ ಬುಧವಾರ ಮಳೆ ಕಾರಣದಿಂದ ಶಾಲೆಗೆ ರಜೆ ನೀಡುವ ಅಗತ್ಯವಿಲ್ಲ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಜಿಲ್ಲಾಡಳಿತಕ್ಕೆ ಹೇಳಿದ್ದಾರೆ. ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ಹಾಗೂ ದಾಂಡೇಲಿ ತಾಲೂಕಿನ ಶಿಕ್ಷಣಾಧಿಕಾರಿಗಳು ರಜೆ ಅಗತ್ಯವಿರುವ ಬಗ್ಗೆ ಉಪನಿರ್ದೇಶಕರಿಗೆ ಹೇಳಿದ್ದಾರೆ. ಅದರ ಪ್ರಕಾರ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ರಜೆ ಅಗತ್ಯವಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಕೋರಿದ್ದಾರೆ. ಇದರೊಂದಿಗೆ ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಹಾಗೂ ತಹಶೀಲ್ದಾರ್ ವರದಿ ಆಧಾರದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಶಾಲಾ-ಕಾಲೇಜಿನ ರಜೆಯ ನಿರ್ಧಾರ ಪ್ರಕಟಿಸುತ್ತಾರೆ.
ಅಗಸ್ಟ 20: ಈ ದಿನವೂ ಆ ಆರು ತಾಲೂಕಿನ ಶಾಲೆಗೆ ರಜೆ!
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಆಗುತ್ತಿರುವುದನ್ನು ಗಮನಿಸಿ ಜಿಲ್ಲಾಡಳಿತ ಅಗಸ್ಟ 20ರಂದು ಆರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನಿಯಮ ಅನ್ವಯವಾಗಲಿದೆ. ಎಂದಿನAತೆ ಶಿಕ್ಷಣ ಇಲಾಖೆ ವರದಿ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆ ಆಧಾರದಲ್ಲಿ ಈ ರಜೆ ನೀಡಲಾಗಿದೆ.
ಶಿಕ್ಷಣಾಧಿಕಾರಿಗಳು ಈ ರಜೆ ಅನುಷ್ಠಾನಕ್ಕೆ ತರುವಂತೆ ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಅವರು ಆದೇಶಿಸಿದ್ದಾರೆ. ಅಂಗನವಾಡಿ, ಪ್ರೌಢಶಾಲೆ ಹಾಘೂ ಪದವಿ ಪೂರ್ವ ಕಾಲೇಜುಗಳಿಗೆ ಈ ರಜೆ ನಿಯಮ ಅನ್ವಯ ಆಗಲಿದೆ.
Discussion about this post