ಯಲ್ಲಾಪುರದ ಬೀಗಾರ್-ಭಾಗಿನಕಟ್ಟಾ ಭೂ ಕುಸಿತ ಪ್ರದೇಶಕ್ಕೆ ಬುಧವಾರ ಅಧಿಕಾರಿಗಳು ಭೇಟಿ ನೀಡಿದ್ದು, ಇಲ್ಲಿ ಮತ್ತಷ್ಟು ಭೂ ಕುಸಿತದ ಸಾಧ್ಯತೆಯಿರುವುದನ್ನು ಗಮನಿಸಿದ್ದಾರೆ. ಮುನ್ನಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿನ ವಾಹನ ಸಂಚಾರಕ್ಕೆ ತಡೆ ಒಡ್ಡಲು ನಿರ್ಧರಿಸಿದ್ದಾರೆ.
ಕಂದಾಯ ಅಧಿಕಾರಿಗಳ ಜೊತೆ ಲೋಕೋಪಯೋಗಿ ಇಂಜಿನಿಯರ್ ಸಹ ಈ ದಿನ ಸ್ಥಳ ಭೇಟಿ ಮಾಡಿದರು. ಹಿಂದಿನ ವರ್ಷ ಭೂ ಕುಸಿತ ಆದ ಪ್ರದೇಶ ಹೊರತುಪಡಿಸಿ ಬೇರೆ ಕಡೆ ಕುಸಿತ ಆಗಿರುವುದನ್ನು ಗಮನಿಸಿದರು. ಈ ಹಿಂದೆ ಕುಸಿತ ಆದ ಪರಿಣಾಮ ಹಾಗೂ ಮಳೆ ಕಾರಣದಿಂದ ಹೊಸದಾಗಿ ಕುಸಿತವಾಗಿರುವುದನ್ನು ದೃಢಪಡಿಸಿದರು.
ಈ ಭೂ ಕುಸಿತದಿಂದ ಯಾವುದೇ ಜೀವ ಹಾನಿ ಆಗದಿರುವ ಬಗ್ಗೆ ಅರಿತ ಅಧಿಕಾರಿಗಳು ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಿದರು. ಅದಾದ ನಂತರ ಇನ್ನಷ್ಟು ಕುಸಿತದ ಸಾಧ್ಯತೆ ಹಿನ್ನಲೆ ಭಾರೀ ಗಾತ್ರದ ವಾಹನ ಸಂಚಾರ ನಿಷೇಧಿಸಲು ನಿರ್ಧರಿಸಿದರು. ಈ ಬಗ್ಗೆ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಲು ಗ್ರಾಮ ಪಂಚಾಯತಗೆ ನಿರ್ದೇಶನ ನೀಡಿದರು. ಭಾರೀ ವಾಹನ ಸಂಚಾರಕ್ಕೆ ಭಾಗಿನಕಟ್ಟಾ-ಚಿಮ್ನಳ್ಳಿ-ತೆಲೆಂಗಾರ ಮಾರ್ಗ ಬಳಸುವಂತೆ ಅಧಿಕಾರಿಗಳು ಹೇಳಿದ್ದಾರೆ.
Discussion about this post