ಅಂಕೋಲಾದ ಶಿರೂರು ವಿವಿದ್ದೋದ್ದೇಶ ಸಹಕಾರಿ ಸಂಘದ ಕಾಗದಪತ್ರಗಳ ಜೊತೆ ಮುಖ್ಯ ಕಾರ್ಯದರ್ಶಿ ಬೀರಣ್ಣ ನಾಯಕ ಅವರು ನಾಪತ್ತೆಯಾಗಿದ್ದಾರೆ. ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ.
`ಸಹಕಾರಿ ಸಂಘ, ಸಂಘದ ನಿರ್ದೇಶಕರು ಹಾಗೂ ಸದಸ್ಯರಿಗೆ ಮೋಸ ಮಾಡುವ ಉದ್ದೇಶದಿಂದಲೇ ಅವರು ಪರಾರಿಯಾಗಿದ್ದಾರೆ’ ಎಂದು ಸಂಘದ ಅಧ್ಯಕ್ಷ ತಿಮ್ಮಾ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ. ಅಂಕೋಲಾ ಬೆಳಸೆಯ ಸಂಕದಗದ್ದೆಯಲ್ಲಿ ವಾಸವಾಗಿರುವ ಬೀರಣ್ಣ ನಾಯಕ ಅವರು ಶಿರೂರಿನ ವಿವಿದೋದ್ದೇಶ ಕೃಷಿ ಸಂಘದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಸಂಘದ ಸಭೆ ನಿರ್ದೇಶಕರು ವಿಷಯವೊಂದಕ್ಕೆ ಸಂಬoಧಿಸಿ ಠರಾವು ಬರೆಯುವಂತೆ ಸೂಚಿಸಿದಾಗ `5 ನಿಮಿಷದಲ್ಲಿ ಬರುತ್ತೇನೆ’ ಎಂದು ಎದ್ದು ಹೋದ ಅವರು ನಂತರ ಅವರ ಕೈಗೆ ಸಿಕ್ಕಿಲ್ಲ.
ಈ ವಿವಿದ್ದೋದ್ದೇಶ ಸಹಕಾರಿ ಸಂಘದಿAದ ಕೆಡಿಸಿಸಿ ಬ್ಯಾಂಕಿಗೆ ಡೆಲಿಗೆಟ್ ಪ್ರತಿನಿಧಿಯಾಗಿ ಮಾರುತಿ ಗೌಡ ಅವರ ಆಯ್ಕೆ ಮಾಡಲಾಗಿತ್ತು. ಈ ಪ್ರಕ್ರಿಯೆ ನಡೆಯುವಾಗ ಎಲ್ಲಾ ಸದಸ್ಯರು ಅಲ್ಲಿದ್ದರು. ಈ ವಿಷಯವನ್ನು ಠರಾವಿನಲ್ಲಿ ನಮೂದಿಸಿ ಡೆಲಿಗೆಟ್ ಪಾರಂ ತುಂಬುವoತೆ ಸಂಘದ ಅಧ್ಯಕ್ಷರು ಸೂಚಿಸಿದ್ದರು. ಈ ವೇಳೆ ಕಾರ್ಯದರ್ಶಿ ಸಭೆಯಿಂದ ಹೊರ ಹೋಗಿದ್ದು, ಸಭೆಗೆ ಮರಳಲಿಲ್ಲ. ಬೀರಣ್ಣ ನಾಯಕ ಅವರಿಗೆ ಫೋನ್ ಮಾಡಿದಾಗ `ಸಂಜೆ ಬರುವೆ’ ಎಂದು ಉತ್ತರಿಸಿದರು. ಸಂಜೆಯವರೆಗೂ ಕಾದ ನಿರ್ದೇಶಕರು ಮತ್ತೆ ಫೋನ್ ಮಾಡಿದಾಗ `ನಾಳೆ ಬೆಳಗ್ಗೆ ಬರುವೆ’ ಎಂದರು. ಬೆಳಗ್ಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.
ಈ ಎಲ್ಲಾ ಹಿನ್ನಲೆ ಸಂಘದ ಅಧ್ಯಕ್ಷರಾಗಿರುವ ಬೆಳಸೆ ಚಂದುಮಠದ ತಿಮ್ಮಣ್ಣ ಗೌಡ ಅವರು ಪೊಲೀಸರ ಮೊರೆ ಹೋದರು. `ಸಂಘಕ್ಕೆ, ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಮೋಸ ಮಾಡುವ ಉದ್ದೇಶದಿಂದ ಸಂಘದ ಮುಖ್ಯಕಾರ್ಯದರ್ಶಿ ಬೀರಣ್ಣ ನಾಯಕ ಅವರು ಸಂಘದ ಠರಾವು ಪುಸ್ತಕ ಹಾಗೂ ಡೆಲಿಗೇಟ್ ಪಾರಂ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ’ ಎಂದು ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಅವರ ಹುಡುಕಾಟ ನಡೆಸಿದ್ದಾರೆ.
Discussion about this post