ದೇವರ ಪೂಜೆಗೆ ಹೂವು ತರಲು ಹೋಗಿದ್ದ ಭಟ್ಕಳದ ಶ್ರೀಮತಿ ಹೆಬ್ಬಾರ್ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಭಟ್ಕಳದ ಮಾರುಕೇರಿಯ ಹೆಜ್ಜಿಲ್ ಬಳಿ ಸದಾಶಿವ ಹೆಬ್ಬಾರ್ ಹಾಗೂ ಶ್ರೀಮತಿ ಹೆಬ್ಬಾರ್ ದಂಪತಿ ವಾಸಿಸುತ್ತಿದ್ದರು. ಬೆಳಗ್ಗೆ ಬೇಗ ಏಳುವ ಶ್ರೀಮತಿ ಹೆಬ್ಬಾರ್ ಅವರು ನಸುಕಿನಲ್ಲಿಯೇ ದೇವರ ಪೂಜೆಗೆ ಸಿದ್ಧತೆ ಮಾಡುತ್ತಿದ್ದರು. ಅದಕ್ಕಾಗಿ ಹೂವುಗಳನ್ನು ಕೊಯ್ದು ತರುತ್ತಿದ್ದರು.
ಅಗಸ್ಟ 19ರಂದು ಬೆಳಗ್ಗೆ 1 ಗಂಟೆಗೆ ಎದ್ದ ಶ್ರೀಮತಿ ಹೆಬ್ಬಾರ್ ಅವರು ಎಂದಿನAತೆ ದೇವರ ಪೂಜೆಗೆ ಸಿದ್ಧತೆ ಮಾಡಿದರು. ಅದಾದ ನಂತರ ಪೂಜೆಗೆ ಅಗತ್ಯವಿರುವ ಹೂವು ತರಲು ಮನೆಯಿಂದ ಹೊರ ಬಿದ್ದರು. ಹೂವು ತರಲು ತೋಟಕ್ಕೆ ಹೋದ ಅವರು ರಾಮಯ್ಯ ಗೊಂಡ ಅವರ ಅಡಿಕೆ ತೋಟ ಪ್ರವೇಶಿಸಿದರು.
ಮಳೆಗಾಲವಾಗಿದ್ದರಿಂದ ತೋಟದಲ್ಲಿ ಪಾಚಿ ಬೆಳೆದಿತ್ತು. ಶ್ರೀಮತಿ ಹೆಬ್ಬಾರ್ ಅವರು ತಮಗೆ ಅರಿವಿಲ್ಲದೇ ಅಲ್ಲಿದ್ದ ಬಾವಿಗೆ ಕಾಲು ಜಾರಿ ಬಿದ್ದರು. ನೀರಿನಲ್ಲಿ ಮುಳುಗಿ ಅವರು ಸಾವನಪ್ಪಿದ್ದು ಆ ನಂತರ ಗೊತ್ತಾಯಿತು. ಪತ್ನಿ ಸಾವಿನ ಬಗ್ಗೆ ಸದಾಶಿವ ಹೆಬ್ಬಾರ್ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ.
Discussion about this post